Home ಸ್ಥಳೀಯ ಸಮಾಚಾರ ಪಡಂಗಡಿ: ಕರು ಕೊಂದ ಚಿರತೆಯ ಸೆರೆಗೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ.

ಪಡಂಗಡಿ: ಕರು ಕೊಂದ ಚಿರತೆಯ ಸೆರೆಗೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ.

0

ಬೆಳ್ತಂಗಡಿ; ಪಡಂಗಡಿ ಗ್ರಾಮದ ಕೊಡಿಯೇಲು ಎಂಬಲ್ಲಿ ಕರುವನ್ನು ಕೊಂದ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಪಡಂಗಡಿ ಪರಿಸರದಲ್ಲಿ ಚಿರತೆ ಸಂಚಾರದ ಮಾಹಿತಿಯನ್ನು ಕಲೆಹಾಕಿ ಚಿರತೆ ಸೆರೆಗೆ ಗೂಡು ಇರಿಸುವ ಕಾರ್ಯ ಮಾಡಿದ್ದಾರೆ.
ದೇಜಪ್ಪ ಮೂಲ್ಯ ಎಂಬುವವರ ಕರುವನ್ನು ಚಿರತೆ ಕೊಂದ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಟಿ.ಎನ್ ಅವರ ಮಾರ್ಗದರ್ಶನದಂತೆ ಇಲಾಖೆಯಿಂದ ದೊರಕುವ ಸೂಕ್ತ ಪರಿಹಾರವನ್ನು ಒದಗಿಸಲು ಈಗಾಗಲೇ ಕ್ರಮ ಕೈಗೊಂಡಿದ್ದು, ಸಹಾಯಕ ವಲಯ ಅರಣ್ಯಾಧಿಕಾರಿ ಕಿರಣ್ ಪಾಟೀಲ್, ಬೀಟ್ ಫಾರೆಸ್ಟರ್ ಪರಶುರಾಮ್, ಪ್ರತಾಪ್ ಕುಮಾರ್, ರವಿಕುಮಾರ್, ದಿವಾಕರ್ ಸಾರ್ವಜನಿಕರ ಸಹಕಾರದೊಂದಿಗೆ ಚಿರತೆಯ ಸೆರೆಗೆ ಗೂಡು ಇರಿಸುವ ಕಾರ್ಯ ಮಾಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version