Home ಸ್ಥಳೀಯ ಸಮಾಚಾರ ಹುಟ್ಟೂರಿಗೆ ಆಗಮಿಸಿದ ನಿವೃತ್ತ ಸೈನಿಕ ಮುಗೇರಡ್ಕ ಶ್ರೀ ಅಶೋಕ್ ಪಿ.ಎಲ್ ರವರಿಗೆ ಶಾಸಕ ಹರೀಶ್ ಪೂಂಜರವರಿಂದ...

ಹುಟ್ಟೂರಿಗೆ ಆಗಮಿಸಿದ ನಿವೃತ್ತ ಸೈನಿಕ ಮುಗೇರಡ್ಕ ಶ್ರೀ ಅಶೋಕ್ ಪಿ.ಎಲ್ ರವರಿಗೆ ಶಾಸಕ ಹರೀಶ್ ಪೂಂಜರವರಿಂದ ಗೌರವಾರ್ಪಣೆ

22
0

ಬೆಳ್ತಂಗಡಿ : ದೇಶದ ಸೈನ್ಯದಲ್ಲಿ ಅನನ್ಯ ಸೇವೆಗೈದು ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಬೆಳ್ತಂಗಡಿ ತಾಲೂಕಿನ ಬಂದಾರು ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮ ಮುಗೇರಡ್ಕದ ಶ್ರೀ ಅಶೋಕ್ ಪಿ.ಎಲ್ ರವರಿಗೆ ಶಾಸಕರ ನಿವಾಸದಲ್ಲಿ ಡಿ. 08 ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಗೌರವಾರ್ಪಣೆ ಸಲ್ಲಿಸಿದರು.
ದಿ. ಲಕ್ಷ್ಮಣ ಗೌಡ ಮತ್ತು ಕುಸುಮ ದಂಪತಿಯ ಪುತ್ರನಾದ ಅಶೋಕ್ ಪಿ ಲ್ ಇವರು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ದರ್ಜೆ ಯಲ್ಲಿ ತೇರ್ಗಡೆ ಪಡೆದು, ಉತ್ತಮ ವಾಲಿಬಾಲ್ ಕ್ರೀಡಾಕೂಟವಾಗಿದ್ದು, ಇವರು 2003 ರಲ್ಲಿ ಭಾರತ ದೇಶದ ರಕ್ಷಣಾ ವಿಭಾಗದ ಏರ್ಪೋರ್ಸ್ ನಲ್ಲಿ ಆಯ್ಕೆ ಯಾಗಿ 2004 ರಲ್ಲಿ ಮಹಾರಾಷ್ಟ್ರ ದ ನಾಸಿಕ್ ನಲ್ಲಿ ತರಬೇತಿ ಪಡೆದು ದೇಶದ ವಿವಿಧ ರಾಜ್ಯಗಳಾದ ಲೇ ಲಡಾಕ್, ಜಮ್ಮು ಕಾಶ್ಮೀರ, ಶಿಲ್ಲೊಂಗ್, ಮೇಘಾಲಯ, ಅಸ್ಸಾಂ, ಪಠಾನ್ ಕೋಟ್, ಕೂಪೂರ, ಬಟಾಮುಲ್ಲಾ, ರಾಂಚಿ ಹೀಗೆ ಹಲವಾರುಗಡಿ ಪ್ರದೇಶಗಳಲ್ಲಿ ಸುಮಾರು 22 ವರ್ಷ ದೇಶ ಸೇವೆ ಮಾಡಿ ನವೆಂಬರ್ 31 ರಂದು ಸೇವೆಯಿಂದ ನಿವೃತ್ತಿ ಗೊಂಡು ಡಿ 04 ರಂದು ಊರಿಗೆ ಬಂದಿರುತ್ತಾರೆ. ಇವರಿಗೆ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ,ಕಣಿಯೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಹಾಗೂ ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಪ್ರಸಾದ್ ಕಡಮ್ಮಾಜೆ, ತಾಲೂಕು ಬಿ ಎಂ ಎಸ್ ಅಧ್ಯಕ್ಷರು ವಕೀಲರಾದ ಉದಯ ಕುಮಾರ್ ಬಿ. ಕೆ, ಬಂದಾರು ಪಂಚಾಯತ್ ಸದಸ್ಯರಾದ ಚೇತನ್ ಪಾಲ್ತಿಮಾರ್, ವಿಮಲ ತಾರಿದಡಿ, ಶಿವಣ್ಣ ಗೌಡ ಹೇವ, ಶಿವಪ್ರಸಾದ್ ಗೌಡ ಸುದೆಪ್ಪಿಲ, ಪ್ರಮುಖರಾದ ಅಶೋಕ ಮೊಗ್ರ, ಕುಶಾಲಪ್ಪ ಗೌಡ, ಗೋಪಾಲ ಗೌಡ, ರಾಜೇಶ್, ಶಿವಪ್ಪ ಗೌಡ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here