Home ಸ್ಥಳೀಯ ಸಮಾಚಾರ ಸಿರಿಯನ್ ಕ್ಯಾಥೊಲಿಕ್ ಸಹಕಾರ ಸಂಘ ಅಧ್ಯಕ್ಷರಾಗಿ ಅನಿಲ್ ಉಪಾಧ್ಯಕ್ಷರಾಗಿ ಜಾರ್ಜ್ ಆಯ್ಕೆ

ಸಿರಿಯನ್ ಕ್ಯಾಥೊಲಿಕ್ ಸಹಕಾರ ಸಂಘ ಅಧ್ಯಕ್ಷರಾಗಿ ಅನಿಲ್ ಉಪಾಧ್ಯಕ್ಷರಾಗಿ ಜಾರ್ಜ್ ಆಯ್ಕೆ

0

ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯು ಡಿ. 8ರಂದು ನಡೆದಿದ್ದು ಮುಂದಿನ 5ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಅನಿಲ್‌ ಎ.ಜೆ, ಉಪಾಧ್ಯಕ್ಷರಾಗಿ ಜಾರ್ಜ್ ಎಮ್.ವಿ. ಅವರು ದ್ವಿತೀಯ ಬಾರಿಗೆ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.

ನಿರ್ದೇಶಕರಾಗಿ ಸೆಬಾಸ್ಟಿನ್‌ ವಿ.ಟಿ, ಜೈಸನ್ ಪಿ.ಎಸ್., ಅಂದಾನಿ ಕೆ.ಡಿ., ಸೆಬಾಸ್ಟಿನ್ ಬಂಗಾಡಿ, ಬಿಜು ಪಿ.ಪಿ, ಬಾಬು ತೋಮಸ್, ಅಜಯ್ ಕೆ.ವಿ., ಸೆಭಾಸ್ಮಿನ್ ಪಿ.ಟಿ, ಚಾಕೋ ಎನ್.ಕೆ., ಸೋಫಿ ಜೋಸೆಫ್, ಫಿಲೋಮಿನಾ ವಿ. ಲಾಲಿ ಮಾಣಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಚುನಾವಣಾಧಿಕಾರಿಯಾಗಿ ಪ್ರತಿಮಾ ಬಿ. ವಿ. ಕಾರ್ಯನಿರ್ವಹಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version