
ಬೆಳ್ತಂಗಡಿ; ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಯೋಜನೆಗಳ ಮಾಹಿತಿ ಕಾರ್ಯಾಕ್ರಮ ಧರ್ಮಸ್ಥಳ ಸೈಂಟ್ ಜೋಸೆಫ್ ಚರ್ಚ್ ಸಮುದಾಯ ಭವನದಲ್ಲಿ ಡಿ.7 ಭಾನುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಯಶೋಧರ ಅವರು ಮಾಹಿತಿ ನೀಡಿ ನಿಗಮದಿಂದ ಇರುವ ಅರಿವು ಸಾಲಯೋಜನೆ, ವಿದೇಶೀ ವಿದ್ಯಾಭ್ಯಾಸ ಸಾಲ ಯೋಜನೆ, ಸ್ವಾವಲಂಭಿ ಸಾರಥಿ ಯೋಜನೆ, ಶ್ರಮ ಶಕ್ತಿ ಯೋಜನೆ, ಶ್ರಮ ಶಕ್ತಿ (ವಿಶೇಷ ಮಹಿಳೆ) ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆ, ಗಂಗಾ ಕಲ್ಯಾಣ ಯೋಜನೆ, ವ್ಯಾಪಾರ ಉದ್ದಿಮೆ ನೇರ ಸಾಲ ಯೋಜನೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆ, ಮುಂತಾದ ವಿವಿಧ ಯೋಜನೆಗಳ ಬಗ್ಗೆ ವಿಸ್ತೃತ ವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳ ಸೈಟ್ ಜೋಸೆಫ್ ಫೊರೋನಾ ಚರ್ಚ್ ನ ಧರ್ಮಗುರುಗಳಾದ ಫಾ.ಜೋಸೆಫ್ ವಾಳೂಕಾರನ್ ವಹಿಸಿದ್ದರು,
ವೇದಿಕೆಯಲ್ಲಿ ಕೆ.ಸಿ.ಡಿ.ಸಿ ಸಂಯೋಜಕ ಜೈಸನ್ ಪಟ್ಟೇರಿಲ್, ಚರ್ಚ ಪಾಲನಾ ಮಡಂಡಳಿ ಸದಸ್ಯ ಟಿ.ವಿ ದೇವಸ್ಯ ಉಪಸ್ಥಿತರಿದ್ದರು.
ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ, ಬೆಳ್ತಂಗಡಿ ಧರ್ಮಪ್ರಾಂತ್ಯ, ಹಾಗೂ ಸೈಟ್ ಜೋಸೆಫ್ ಫೊರೋನಾ ಚರ್ಚ್ ನ ಸಹಕಾರದೊಂದಿಗೆ ನಡೆಯಿತು.