
ಬೆಳ್ತಂಗಡಿ: ಅಕ್ರಮ ಡ್ರಗ್ಸ್ ಸಾಗಾಟ ಹಾಗೂ ಮಾರಾಟ ಮಾಡಿದ ಪ್ರಕರಣದಲ್ಲಿ ಐವರು ಆರೋಪಿಗಳಿಗೆ 12ರಿಂದ 14 ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿ ಮಂಗಳೂರಿನ ನ್ಯಾಯಾಲಯ ತೀರ್ಪು ನೀಡಿದೆ. 2022 ರಲ್ಲಿ
ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ 125 ಗ್ರಾಂ ಎಂಡಿಎಂ ಅನ್ನು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳಾದ ಸೂಡಾನ್ ಪ್ರಜೆ ಡೇನಿಯಲ್, ಕಾಸರಗೋಡಿನ ಮುಹಮ್ಮದ್ ರಮೀಜ್, ಕಾಸರಗೋಡಿನ ಮೊಯ್ದಿನ್ ರಶೀದ್, ಅಬ್ದುಲ್ ರವೂಫ್, ಹಾಗೂ ಬೆಂಗಳೂರಿನ ಸಬಿತ ಎಂಬವರಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಸೂಡಾನ್ ಪ್ರಜೆ ಡ್ಯಾನಿಯೆಲ್ ಎಂಬಾತನಿಗೆ 12ವರ್ಷ ಕಠಿಣ ಸಜೆ ಹಾಗೂ 1,25,000 ಸಾವಿರ ದಂಡ ವಿಧಿಸಿದೆ, ಕಾಸರಗೋಡು ನಿವಾಸಿ ಮೊಹಮ್ಮದ್ ರಮೀಜ್ ಎಂಬಾತನಿಗೆ 14ವರ್ಷ ಸಜೆ ಹಾಗೂ 1,45 ಲಕ್ಷ ದಂಡ, ಹಾಗೂ ಕಾಸರಗೋಡು ನಿವಾಸಿ ಮೊಯ್ದೀನ್ ರಶೀದ್ ಎಂಬಾತನಿಗೆ 12ವರ್ಷ ಕಠಿಣ ಸಜೆ ಹಾಗೂ 1.25ಲಕ್ಷ ದಂಡ, ಹಾಗೂ ಕಾಸರಗೋಡು ನಿವಾಸಿ ಅಬ್ದುಲ್ ರವೂಫ್ ಎಂಬಾತನಿಗೆ 13ವರ್ಷ ಸಜೆ ಹಾಗೂ 1.35 ಲಕ್ಷ ದಂಡ ಹಾಗೂ ಬೆಂಗಳೂರು ನಿವಾಸಿ ಸಬಿತ ಎಂಬಾಕೆಗೆ 12ವರ್ಷ ಸಜೆ ಹಾಗೂ 1.35 ಲಕ್ಷ ದಂಡ ವಿಧಿಸಿ ಆದೇಶ ನೀಡಿದೆ.
ಮಾದಕ ವಸ್ತುಗಳ ಸಾಗಾಟ ಪ್ರಕರಣದಲ್ಲಿ 14ವರ್ಷಗಳ ಶಿಕ್ಷೆ ವಿಧಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.




