
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಆರೋಪಿ ಚಿನ್ನಯ್ಯನಿಗೆ ಜೀವ ಬೆದರಿಕೆಯಿದ್ದು ಆತನಿಗೆ ಸೂಕ್ತ ರಕ್ಷಣೆ ನೀಡಬೇಕು ಹಾಗೂ ಆತನಿಗೆ ಜಾಮೀನು ನೀಡುವಾಗ ವಿಧಿಸಿರುವ ಹತ್ತನೆಯ ನಿಬಂಧನೆಯನ್ನು ಸಡಿಲಗೊಳಿಸಬೇಕು ಎಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಚಿನ್ನಯ್ಯನ ಪರ ವಕೀಲರು ಅಪೀಲು ಸಲ್ಲಿಸಿದ್ದಾರೆ
ಸಾಕ್ಷಿ ಸಂರಕ್ಷಣಾ ಕಾಯ್ದೆಯಲ್ಲಿ ರಕ್ಷಣೆ ಪಡೆದಿದ್ದ ಚಿನ್ನಯ್ಯ ಆರೋಪಿಯಾದ ಬಳಿಕ ಈ ರಕ್ಷಣೆಯನ್ನು ಕಳೆದುಕೊಂಡಿದ್ದ ಇದೀಗ ದಕ್ಷಿಣ ಕನ್ನಡ ಜಿಲ್ಲಾ ಸಕ್ಷಮ ಪ್ರಾಧಿಕಾರದ ಮುಂದೆಯೂ ನ್ಯಾಯವಾದಿಗಳು ಚಿನ್ನಯ್ಯನಿಗೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದು ಇದರ ಆಧಾರದ ಮೇಲೆ ಬೆಳ್ತಂಗಡಿ ನ್ಯಾಯಾಲಯದಲ್ಲಿಯೂ ಆತನಿಗೆ ಜೀವ ಭಯವಿದ್ದು ಸೂಕ್ತ ರಕ್ಷಣೆ ನೀಡುವಂತೆ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಅದೇರೀತಿ ಚಿನ್ನಯ್ಯ ಜಾಮೀನಿನ ಮೇಲೆ ಹೊರ ಬಂದರೆ ಆತ ಸ್ಥಳಿಯ ಠಾಣೆಗೆ ಬಂದು ಸಹಿ ಹಾಕುವಂತೆ ನಿಬಂಧನೆ ವಿಧಿಸಲಾಗಿದ್ದು ಈ ನಿಬಂಧನೆಯನ್ನು ಸಡಿಲಿಸುವಂತೆ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಲಾಗಿದೆ.
ಆರೋಪಿ ಚಿನ್ನಯ್ಯ ಜಮೀನು ಲಭಿಸಿದರೆ ಆತನ ಊರಾದ ಮಂಡ್ಯದಲ್ಲಿ ವಾಸಿಸಲು ನಿರ್ಧರಿಸಿದ್ದಾನೆ ಈ ಹಿನ್ನಲೆಯಲ್ಲಿ ಠಾಣೆಗೆ ಹಾಜರಾತಿಗೆ ವಿನಾಯತಿ ನೀಡುವಂತೆಯೂ ವಿನಂತಿಸಲಾಗಿದೆ
ಆರೋಪಿ ಚಿನ್ನಯ್ಯ ರಕ್ಷಣೆ ಕೋರಿರುವ ಬಗ್ಗೆ ರಕ್ಷಣೆ ನೀಡುವ ಬಗ್ಗೆ ಬೆಳ್ತಂಗಡಿ ವೃತ್ತ ನಿರೀಕ್ಷಕರಿಂದ ಹಾಗೂ ಇತರ ವಿಚಾರಗಳ ಬಗ್ಗೆ ಎಸ್.ಐ.ಟಿ ಅಧಿಕಾರಿಗಳಿಂದ ನ್ಯಾಯಾಲಯ ವರದಿಯನ್ನು ಕೋರಿದೆ. ಸೆಕ್ಷನ್ 215 ರ ಕುರಿತಾದ ವರದಿಯ ಬಗ್ಗೆ ವಾದಮಂಡಿಸಲು ವಕೀಲರು ಸಮಯಾವಕಾಶ ಕೋರಿದ್ದು ಒಟ್ಟು ಪ್ರಕರಣದ ವಿಚಾರಣೆಯನ್ನು ಡಿ. 9 ಕ್ಕೆ ವಿಚಾರಣೆಯನ್ನುಮುಂದೂಡಲಾಗಿದೆ.







