
ಬೆಳ್ತಂಗಡಿ; ಮೆಸ್ಕಾಂ ಅಧ್ಯಕ್ಷ ಕೆ ಹರೀಶ್ ಕುಮಾರ್ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಮೆಸ್ಕಾಂ ಆದ್ಯಕ್ಷರು ಹಾಗೂ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಕೆ ಹರೀಶ್ ಕುಮಾರ್ ಅವರು ಇನ್ನು ರಾಜ್ಯ ಸಚಿವರು ಪಡೆಯುವ ಎಲ್ಲ ಸೌಲಭ್ಯಗಳನ್ನು ಪಡೆಯಬಹುದಾಗಿದ್ದು ರಾಜ್ಯ ಸಚಿವರ ಪ್ರೊಟೋಕಾಲ್ ಗಳು ಅವರಿಗೆ ಅನ್ವಯವಾಗಲಿದೆ. ಈಬಗ್ಗೆ ಸರಕಾರ ಆದೇಶ ಹೊರಡಿಸಿದೆ.










