
ಬೆಳ್ತಂಗಡಿ: ಧರ್ಮಸ್ಥಳ ದಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಇಬ್ಬರು ವ್ಯಕ್ತಿಗಳನ್ನು ಧರ್ಮಸ್ಥಳ ಪೊಲೀಸರ ಮಾಹಿತಿ ಮೇರೆಗೆ ಶೌರ್ಯ ತಂಡದ ಸದಸ್ಯರಾದ ಸಚಿನ್ ಭಿಡೆ ಹಾಗೂ ಧಣೇಶ್ ರವರು ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಧರ್ಮಸ್ಥಳದಲ್ಲಿ ವ್ಯಕ್ತಿಯೊಬ್ಬ ಅಸ್ವಸ್ಥಗೊಂಡು ಬಿದ್ದಿದ್ದ ಬಗ್ಗೆ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದು ಧರ್ಮಸ್ಥಳ ಪೊಲೀಸರು ಶೌರ್ಯ ತಂಡದ ಸದಸ್ಯ ಸಚಿನ್ ಬೀಡೆ ಅವರಿಗೆ ತಿಳಿಸಿದ್ದು ತಕ್ಷಣ ಧಣೇಶ್ ಅವರನ್ನು ಸಂಪರ್ಕಿಸಿ ಧರ್ಮಸ್ಥಳದಿಂದ ಅಂಬುಲೆನ್ಸ್ ನಲ್ಲಿ ಅಸ್ವಸ್ಥರಾಗಿ ಬಿದ್ದಿದ್ದ ಓರ್ವ ವ್ಯಕ್ತಿಯನ್ನು ಕರೆದುಕೊಂಡು ಬಂದಿದ್ದಾರೆ.
ಇದೇ ವೇಳೆ ಕನ್ಯಾಡಿ ಸಮೀಪ ಇನ್ನೊರ್ವ ಯುವಕ ಅಸ್ವಸ್ಥರಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದರು ಇದನ್ನು ಗಮನಿಸಿದ ಶೌರ್ಯ ತಂಡದವರು ಈತನನ್ನು ಆಂಬುಲೆನ್ಸ್ ಮೂಲಕ ಕರೆದುಕೊಂಡು ಬಂದು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.