
ಬೆಳ್ತಂಗಡಿ; ಗುರು ಗಾಂಧಿ ಸಂವಾದ ಶತಮಾನದ ಮಹಾಪ್ರಸ್ಥಾನ ಸಂವಾದ ಶತಮಾನೋತ್ಸವದ
ಆಚರಣೆಗಾಗಿ ತಾರೀಕು 03. 12. 25ರಂದು ಮಂಗಳೂರಿನ ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯ ಕ್ಯಾಂಪಸ್ ಕೊಣಾಜೆ ಆವರಣದಲ್ಲಿ ಬೆಳಗ್ಗೆ 9:30 ಗಂಟೆಯಿಂದ ನಡೆಯುವ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಇಂದು ಬೆಳ್ತಂಗಡಿಯ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಸಭಾಭವನದಲ್ಲಿ ನಡೆಯಿತು.
ಬೆಳ್ತಂಗಡಿ ತಾಲೂಕಿನಿಂದ ಅತಿ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅಧ್ಯಕ್ಷರಾದ ಜಯವಿಕ್ರಂ ಕಲ್ಲಾಪು ಮನವಿ ಮಾಡಿದರು. ಇದೊಂದು ಐತಿಹಾಸಿಕ ಸಮಾರಂಭ ಪ್ರತಿಯೊಬ್ಬರು ಸಮಾಜದ ಹಬ್ಬವೆಂದು ಪರಿಗಣಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಮಾಜಿ ಅಧ್ಯಕ್ಷರಾದ ಪೀತಾಂಬರ ಹೇರಾಜೇಯವರು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಸುಜಿತ ವಿ ಬಂಗೇರ, ಮಾಜಿ ಅಧ್ಯಕ್ಷರಾದ ಜಯರಾಮ್ ಬಂಗೇರ ಹೆರಾಜೆ , ಚಿದಾನಂದ ಎಲ್ದಕ್ಕ, ಉಪಾಧ್ಯಕ್ಷರಾದ ಸುಂದರ ಪೂಜಾರಿ, ಮಹಿಳಾ ಸಂಘದ ಅಧ್ಯಕ್ಷರಾದ ಸುಮಾ ಪ್ರಮೋದ್, ಕಾರ್ಯದರ್ಶಿ ನಿತೇಶ್ ಕುಮಾರ್ ವೇಣೂರು, ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾದ ಎಮ್ ಕೆ ಪ್ರಸಾದ್, ಯುವ ವಾಹಿನಿ ಅಧ್ಯಕ್ಷರಾದ ಶ್ರೀ ಗುರು ರಾಜ್ ಗುರಿಪಳ್ಳ, ಹಾಗೂ ಇತರ ಗಣ್ಯರು ಹಾಜರಿದ್ದರು.