Home ರಾಷ್ಟ್ರ/ರಾಜ್ಯ ಧರ್ಮಸ್ಥಳ; ಡಾ.ಡಿ ವೀರೇಂದ್ರ ಹೆಗ್ಗಡೆಯವರ ಅಂಚೆ ಚೀಟಿ ಬಿಡುಗಡೆ

ಧರ್ಮಸ್ಥಳ; ಡಾ.ಡಿ ವೀರೇಂದ್ರ ಹೆಗ್ಗಡೆಯವರ ಅಂಚೆ ಚೀಟಿ ಬಿಡುಗಡೆ

32
0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ
ಡಾ.ಡಿ.ವೀರೇಂದ್ರಹೆಗ್ಗಡೆಯವರ 78ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ, ಹೆಗ್ಗಡೆಯವರು ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ನೀಡಿದ ಅನನ್ಯ ಸೇವೆಗಾಗಿ ಭಾರತೀಯ ಜೀವ ವಿಮಾ ನಿಗಮ ಮತ್ತು ಇತರರ ನೇತೃತ್ವದಲ್ಲಿ ಗೌರವ ಸಮರ್ಪಣೆ ಹಾಗೂ ಪೂಜ್ಯರ ಭಾವ ಚಿತ್ರ ಇರುವ ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮ ನ.25 ರಂದು ಅಮೃತವರ್ಷಿಣಿ ಸಭಾಂಗಣದಲ್ಲಿ ಜರುಗಿತು.


ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ, ಆಶೀರ್ವಚನ ನೀಡಿದರು. ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆ ಉಪಸ್ಥಿತರಿದ್ದರುಮುಖ್ಯ ಅತಿಥಿಗಳಾಗಿ, ಡಾ ಎಪಿಜೆ ಅಬ್ದುಲ್ ಕಲಾಂ ಇಂಟರ್ನ್ಯಾಷನಲ್ ಫೌಂಡೇಶನ್ ನ ಸಹ ಸ್ಥಾಪಕರಾದ ಎಪಿಜೆಎಂಜೆ ಶೇಖ್ ಸಲೀಂ, ಪುನೀತ್ ಕುಮಾ‌ರ್, ಇಡಿ, ಎಸ್‌ಸಿಝಡ್, ಹೈದರಾಬಾದ್, ರಮೇಶ್‌ ಪ್ರಭು, ಅಧೀಕ್ಷಕರು ಅಂಚೆ ಕಛೇರಿ ಉಡುಪಿ, ಸಂಜಯ್ ಕೊಚಾರ್, ಜನರಲ್ ಮ್ಯಾನೇಜರ್ -ಎಎಂಜಿ, ಮರ್ಸಿಡಿಸ್‌-ಬೆನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಡಿ. ಚಂದ್ರಶೇಖರ ಪ್ರಸಾದ್, ಮಾರುಕಟ್ಟೆ ಸಿಇಒ, ಸುಂದರಂ ಮೋಟಾರ್ಸ್, ಗಣಪತಿ ಎನ್. ಭಟ್, ಎಲ್‌ಐಸಿ ರಮೇಶ್ ಪ್ರಭು, ಸೂಪರಿಂಟೆಂಡೆಂಟ್ ಪೋಸ್ಟ್ ಆಫೀಸ್ ಉಡುಪಿ ಭಾಗವಹಿಸಿದ್ದರು
ಪೂಜ್ಯರು ಡಾ .ಡಿ ವೀರೇಂದ್ರ ಹೆಗ್ಗಡೆ ಅವರ ಜೀವನ ಮತ್ತು ಸಾಧನೆಯ ಕುರಿತು ವೀಡಿಯೊ ಪ್ರದರ್ಶನ ಹಾಗೂ ಅಂಚೆ ಇಲಾಖೆ ಹೊರತಂದ ಖಾವಂದರ ಭಾವಚಿತ್ರ ಇರುವ ಅಂಚೆ ಚೀಟಿ ಬಿಡುಗಡೆ ನಡೆಯಿತು. ಡಾ.ಎಪಿಜೆ ಅಬ್ದುಲ್ ಕಲಾಂ ಇಂಟರ್ನ್ಯಾಷನಲ್ ಫೌಂಡೇಶನ್ ನ ವತಿಯಿಂದ ಡಾ.ಹೆಗ್ಗಡೆಯವರನ್ನು ಗೌರವಿಸಲಾಯಿತು.
ಗಣಪತಿ ಎನ್. ಭಟ್, ಎಸ್ ಡಿ ಎಂ ಎಲೈಸಿ-ಉಡುಪಿ ಡಿ.ಒ ಸ್ವಾಗತಿಸಿದರು. ದಿನೇಶ್ ಪ್ರಭು, ಮೈಕ್ರೋ ಇನ್ಸುರೆನ್ಸ್ ಮ್ಯಾನೇಜ‌ರ್, ಎಲ್‌ಐಸಿ ಉಡುಪಿ ಧನ್ಯವಾದವಿತ್ತರು

LEAVE A REPLY

Please enter your comment!
Please enter your name here