Home ಸ್ಥಳೀಯ ಸಮಾಚಾರ ಬೆಳ್ತಂಗಡಿ; ಡಿ.3ರಂದು ಮಂಗಳೂರಿನಲ್ಲಿ ವರ್ಕಳ ಸಂವಾದದ ಶತಮಾನೋತ್ಸವ ಕಾರ್ಯಕ್ರಮ;  ಸಂಚಾಲಕರಾದ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ವಿವಿಧ...

ಬೆಳ್ತಂಗಡಿ; ಡಿ.3ರಂದು ಮಂಗಳೂರಿನಲ್ಲಿ ವರ್ಕಳ ಸಂವಾದದ ಶತಮಾನೋತ್ಸವ ಕಾರ್ಯಕ್ರಮ;  ಸಂಚಾಲಕರಾದ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ವಿವಿಧ ಸಮುದಾಯಗಳ ಪ್ರಮುಖರ ಸಭೆ; ತಾಲೂಕಿನಿಂದ 5000 ಜನರು ಬಾಗಿ

26
0

ಬೆಳ್ತಂಗಡಿ. ವರ್ಕಳದ ಶಿವಗಿರಿ ಮಠ ಹಾಗೂ ಮಂಗಳೂರು ನಾರಾಯಣ ಗುರು ಅಧ್ಯಯನ ಪೀಠದ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ವರ್ಕಳ ಸಂವಾದದ ಶತಮಾನೋತ್ಸವ ಹಾಗೂ ನಾರಾಯಣ ಗುರುಗಳ ಮಹಾನಿರ್ವಾಣ ಶತಮಾನೋತ್ಸವ ಕಾರ್ಯಕ್ರಮವು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ಉಪಸ್ಥಿತಿಯಲ್ಲಿ ಡಿ.3ರಂದು ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ನಡೆಯಲಿದ್ದು.

ಈ ಕಾರ್ಯಕ್ರಮದ ಬಗ್ಗೆ ಬೆಳ್ತಂಗಡಿ ತಾಲೂಕಿನ ವಿವಿಧ ಸಮುದಾಯದಗಳ ಮುಖಂಡರುಗಳ ಕೂಡುವಿಕೆಯೊಂದಿಗೆ ಪೂರ್ವಭಾವಿ ಸಭೆಯು ಬೆಳ್ತಂಗಡಿ ನಾರಾಯಣಗುರು ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳು ಹಾಗೂ ಶಿವಗಿರಿ ಮಠದ ಜ್ಞಾನತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಸಭೆಯಲ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕಾರ್ಯಕ್ರಮದ ಸಂಚಾಲಕರು ರಕ್ಷಿತ್ ಶಿವರಾಂ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿ ತಾಲೂಕಿನಿಂದ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದರು. ಈ ಸಂದರ್ಭದಲ್ಲಿ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್, ಗೆಜ್ಜೆ ಗಿರಿ ಕ್ಷೇತ್ರದ ಗೌರವ ಅಧ್ಯಕ್ಷರಾದ ಪಿತಾಂಬರ ಹೆರಾಜೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಲಕ್ಷ್ಮೀಶ ಗಬ್ಬಲಡ್ಕ,, ಪ್ರಮುಖರಾದ ಜಯರಾಮ್ ಶೆಟ್ಟಿ ವೇಣೂರು, ಜಯವೀಕ್ರಮ ಕಲ್ಲಾಪು, ಪಿ ಟಿ ಸೆಬಾಸ್ಟಿಯನ್, ಸಂತೋಷ್ ಕುಮಾರ್, ಮೋಹನ್ ಗೌಡ ಕಲ್ಮಂಜ, ನೇಮಿರಾಜ್ ಕಿಲ್ಲೂರು, ಆಯುಬ್ ಡಿ.ಕೆ, ಬೇಬಿ ಸುವರ್ಣ ಮಾಲಾಡಿ, ಬಿ.ಕೆ. ವಸಂತ್ ಪ್ರವೀಣ್ ಹಳ್ಳಿ ಮನೆ, ವೀರೇಂದ್ರ ಕುಮಾರ್ ಜೈನ್, ದಿನೇಶ್ ಮೂಲ್ಯ ಕೊಂಡೆ ಮಾರ್, ದಯಾನಂದ ದೇವಾಡಿಗ ಮೇಣೂರು, ಶ್ರೀಮತಿ ಶೋಭಾ ನಾರಾಯಣ ಗೌಡ, ಶ್ರೀಮತಿ ಸುಮತಿ ಪ್ರಮೋದ್, ನಮಿತಾ ಕೆ ಪೂಜಾರಿ, ಶ್ರೀನಿವಾಸ್ ಕಿಣಿ, ದಿವಾಕರ ಭಂಡಾರಿ, ಸತೀಶ್ ಹೆಗ್ಡೆ, ನಿತೀಶ್ ಕೋಟ್ಯಾನ್ ಎಂ. ಕೆ ಪ್ರಸಾದ್ , ಹಾಗೂ ವಿವಿಧ ದೇವಸ್ಥಾನಗಳ, ಸಮುದಾಯಗಳ ಮತ್ತು ಪಕ್ಷಗಳ ಅಧ್ಯಕ್ಷರು ಸದಸ್ಯರು, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here