ಬೆಳ್ತಂಗಡಿ :ನಿರ್ಮಾಣ ಹಂತದ ಮನೆಯ ಫೈಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಕಟ್ಟಡದ ಮೇಲಿನಿಂದಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಜಿರೆ ರೆಂಜಾಳ ನಿವಾಸಿ ಪ್ರಮೋದ್ ಗೌಡ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನ.17ರಂದು ನಡೆದಿದೆ.
ಉಜಿರೆ ರೆಂಜಾಳ ನಿವಾಸಿ ಪ್ರಮೋದ್ ಗೌಡ (37) ತಿಂಗಳ ಹಿಂದೆ (ಅ.10 ರಂದು) ಕಣಿಯೂರು ಗ್ರಾಮದ ಪಣೆಕರ ಎಂಬಲ್ಲಿನ ನಿವಾಸಿ ಸುಧೀರ್ ರೈ ಎಂಬವರ ಮನೆಯ ಕೆಲಸಮಾಡುತ್ತಿದ್ದ ವೇಳೆ ಅವರು 15 ಅಡ್ಡಿ ಎತ್ತರದಿಂದ ನೆಲಕ್ಕೆ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರದಂದು ಅವರು ಮೃತಪಟ್ಟಿದ್ದಾರೆ. ಮೃತರ ಪತ್ನಿ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.










