Home ಅಪಘಾತ ರೆಖ್ಯ ಬೆಂಕಿ ಆಕಸ್ಮಿಕ ಸಂಪೂರ್ಣ ಸುಟ್ಟು ಹೋದ ಮನೆ

ರೆಖ್ಯ ಬೆಂಕಿ ಆಕಸ್ಮಿಕ ಸಂಪೂರ್ಣ ಸುಟ್ಟು ಹೋದ ಮನೆ

47
0

ಕೊಕ್ಕಡ: ರೆಖ್ಯ ಸಮೀಪ ಕೊಲಾರು ನಿವಾಸಿ ಬಾಲಕೃಷ್ಣ ಎಂಬವರ ಮನೆ ನ.13 ರಂದು ಬೆಳಗ್ಗೆ ಭೀಕರ‌ ಅಗ್ನಿ ದುರಂತ ಸಂಭವಿಸಿ ಸಂಪೂರ್ಣ ಸುಟ್ಟು ಕರಕಾಲಗಿದ್ದು ಭಾರೀ ನಷ್ಟ ಸಂಭವಿಸಿದೆ.

ಬೆಂಕಿ ಅನಾಹುತ ಸಂಭವಿಸಿದ ಸಮಯ ಮನೆ ಮಂದಿ ಕೆಲಸಕ್ಕೆ ಹೋಗಿರುವ ಕಾರಣ ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿಯಿಂದ ಪಾರಾಗಿದ್ದಾರೆ. .ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಸುಮಾರು 45000 ಹಣ, ಹಾಗೂ ಚಿನ್ನದ ಒಡವೆ , ಮಕ್ಕಳ ಪುಸ್ತಕ, ಬಟ್ಟೆ ಇನ್ನಿತರ ಮನೆಯೊಳಗಿನ ಎಲ್ಲ ಸಾಮಾಗ್ರಿಗಳು ಸುಟ್ಟು ಕರಕಲಾಗಿದೆ. ಬೆಂಕಿ ಹೇಗೆ ಹಿಡಿದುಕೊಂಡಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ಮನೆ ಮಂದಿಯೂ ಆತಂಕದಲ್ಲಿದ್ದಾರೆ . ಸ್ಥಳಕ್ಕೆ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ, ಮತ್ತು ಪಂಚಾಯತ್‌ ಸದಸ್ಯರು ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here