ಬೆಳ್ತಂಗಡಿ; ಉಜಿರೆಯಲ್ಲಿ ತರಕಾರಿ ಅಂಗಡಿಯ ಮುಂದೆ ಸ್ಕೂಟರ್ ನಿಲ್ಲಿಸಿ ತರಕಾರಿ ತೆಗೆದುಕೊಂಡು ಬರುವ ವೇಳೆಗೆ ಸ್ಕೂಟರ್ ಕಳ್ಳತನವಾದ ಘಟನೆ ನ12ರಂದು ನಡೆದಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಳಾಲು ನಿವಾಸಿ ಧರ್ಮಪಾಲಜೈನ್ ಎಂಬವರು ಉಜಿರೆ ಪೇಟೆಗೆ ಬಂದವವರು ತಮ್ಮ ಸ್ಕೂಟರ್ ಹೋಂಡಾ ಆಕ್ಟೀವಾ ಕೆ.ಎ 70 ಜೆ 169 ಅನ್ನು ಬೆಳಗ್ಗೆ 11ಗಂಟೆಯ ಸುಮಾರಿಗೆ ಉಜಿರೆಯ ಜೈನ್ ತರಕಾರಿ ಅಂಗಡಿಯ ಮುಂದೆ ನಿಲ್ಲಿಸಿ ತರಕಾರಿ ಅಂಗಡಿಗೆ ತೆರಳಿ ತರಕಾರಿ ತೆಗೆದುಕೊಂಡು 11.45 ರ ಸುಮಾರಿಗೆ ಬಂದು ನೋಡಿದಾಗ ನಿಲ್ಲಿಸಿದ್ದ ಜಾಗದಲ್ಲಿ ಸ್ಕೂಟರ್ ಇರಲಿಲ್ಲ ಸುತ್ತ ಮುತ್ತ ಹುಡುಕಾಡಿದರೂ ಸಿಗದ ಹಿನ್ನಲೆಯಲ್ಲಿ ಸ್ಕೂಟರ್ ಕಳೆದು ಹೋದ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಕೂಟರ್ ಮೌಲ್ಯ ಸುಮಾರು 60,000 ಸಾವಿರ ಎಂದು ಅಂದಾಜಿಸಲಾಗಿದೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್ ಅರ್ಧ ಗಂಟೆಯೊಳಗೆ ಕಳ್ಳತನವಾಗಿರುವುದು ಜರಲ್ಲಿ ಕಳ್ಳರಬಗ್ಗೆ ಭಯ ಮೂಡಲು ಕಾರಣವಾಗಿದೆ. ಪೊಲೀಸರು ಸ್ಥಳೀಯ ಸಿಸಿ ಕ್ಯಾಮರ ಗಳನ್ನು ಪರಿಶೀಲಿಸಿದ್ದು ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡುತ್ತಿದ್ದಾರೆ.
