ಬೆಳ್ತಂಗಡಿ: ತಾಲೂಕಿನ ಹತ್ಯಡ್ಕ ಗ್ರಾಮದ ತುಂಬೆದಡ್ಕ ಮಾರಿಗುಡಿ ಸಮೀಪ, ಮುದ್ದಿಗೆ ಕಾಯರ್ತಡ್ಕ ಸಂಪರ್ಕ ರಸ್ತೆಯಲ್ಲಿ ಸೋಮವಾರ ರಾತ್ರಿ ವೇಳೆ ಎರಡು ಕಾಡಾನೆಗಳು ಓಡಾಟ ನಡೆಸುತ್ತಿರುವುದು ಕಂಡು ಬಂದಿದೆ. ಇದರ ಫೊಟೋಗಳು ಸಾಮಾಜಿಕ ಜಾಕತಾಣಗಳಲ್ಲಿ ಹರಿದಾಡುತ್ತಿದೆ ಈ ರಸ್ತೆಗಳ ಮೂಲಕ ದ್ವಿಚಕ್ರ ಸವಾರರರು ಸೇರಿದಂತೆ ಹಲವಾರು ಪ್ರಯಾಣಿಸುವ ಸಮಯ ಇದಾಗಿದ್ದು ಆನೆಗಳು ರಸ್ತೆಗೆ ಇಳಿದಿರುವುದು ಸ್ಥಳೀಯರಲ್ಲಿ ಆತಂಕ ಮೂಡಲು ಕಾರಣವಾಗಿದೆ.
