ಬೆಳ್ತಂಗಡಿ: ಅಕ್ರಮ ಗೋ ಸಾಗಾಟ ಗಾರರಿಗೆ ದನವನ್ನು ಮಾರಾಟ ಮಾಡಿದ್ದಾರೆ ಎಂದು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ರಮೆ ಗ್ರಾಮದ ಪಟ್ಟೂರು ಎಂಬಲ್ಲಿನ ನಿವಾಸಿ ಜೊಹರಾ ಎಂನವರ ಮನೆಯನ್ನು ಧರ್ಮಸ್ಥಳ ಪೊಲೋಸರು ಮುಟ್ಟುಗೋಲು ಹಾಕಿರುವ ಕ್ರಮ ಕಾನೂನು ಬಾಹಿರ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ದವಾಗಿದೆ ಈ ಕ್ರಮವನ್ನು ಹಿಂಪಡೆದು ಮೂವರು ಮಕ್ಕಳುಒಂದಿಗೆ ಬದುಕುತ್ತಿರುವ ಬಡ ಮಹಿಳೆಯ ಕುಟುಂಬಕ್ಕೆ ಬದುಕುವ ಅವಕಾಶವನ್ನು ನೀಡುವಂತೆ ಸಿಪಿಐಎಂ ಪಕ್ಷದ ಮುಖಂಡ ಬಿ.ಎಂ ಭಟ್ ಅವರು ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ ನೀಡಿದ್ದಾರೆ.
ನ.4 ರಂದು ಅಕ್ರಮವಾಗಿ ದನಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿದ್ದರು. ಪ್ರಕರಣದಲ್ಲಿ ಇವರಿಗೆ ದನ ಮಾರಾಟ ಮಾಡಿದ್ದ ಪಟ್ಟೂರು ನಿವಾಸಿ ಜೊಹರಾ ಎಂಬವರ ವಿರುದ್ದವೂ ಪ್ರಕರಣ ದಾಖಲಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಮುಂದುವರಿಸಿದ ಧರ್ಮಸ್ಥಳ ಪೊಲೀಸರು ನ 6 ರಂದು ಜೊಹರ ಅವರ ಮನೆಯನ್ನು ಮುಟ್ಟುಗೋಲು ಹಾಕಿದ್ದು ಈ ಮನೆಯಲ್ಲಿರುವ ಶಾಲೆಗ ಹೋಗುವ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಮೂವರು ಮಕ್ಕಳು ಹಾಗೂ ಇಡೀ ಕುಟುಂಬ ಬೀದಿಗೆ ಬಿದ್ದಂತಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಹಾಲು ಉತ್ಪಾದಕರು ಕೃಷಿಕರು ಜಾನುವಾರುಗಳನ್ನು ಖರೀದಿಸುವುದು ಮಾರಾಟ ಮಾಡುವುದು ಸಾಮಾನ್ಯ ವಿಚಾರವಾಗಿದೆ ಖರೀದಿಸಿದವರು ಅದನ್ನು ಕಾನೂನು ಬಾಹಿರ ಕೆಲಸಗಳಿಗೆ ಉಪಯೋಗಿಸುತ್ತಾರೋ ಎಂಬುದು ಅವರಿಗೆ ತಿಳಿಯಲು ಸಾಧ್ಯವಿಲ್ಲ ಹೀಗಿರುವಾಗ ದನವನ್ನು ಮಾರಿದರು ಎಂಬ ಕಾರಣಕ್ಕೆ ಒರ್ವ ಮಹಿಳೆ ತನ್ನ ಮಕ್ಕಳೊಂದಿಗೆ ವಾಸಿಸುತ್ತಿರುವ ಮನೆಯನ್ನು ಸರಿಯಾದ ನೋಟೀಸ್ ಕೂಡಾ ನೀಡದೆ ಮುಟ್ಟುಗೋಲು ಹಾಕಿರುವುದು ಕಾನೂನು ಬಾಹಿರವಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸರು ಪ್ರಕರಣದಲ್ಲಿ ಜೊಹರಾ ಅವರು ಮಾಡಿರುವುದು ದನ ಸಾಗಾಟ ಗಾರರಿಗೆ ದನವನ್ನು ಮಾರಿರುವುದು ಮಾತ್ರ ದನದ ಹತ್ಯೆ ಜೊಹರಾ ಅವರಿಗೆ ಸೇರಿರುವ ಜಾಗದಲ್ಲಿ ನಡೆದಿರುವ ಬಗ್ಗೆ ಎಫ್.ಐ.ಆರ್ ನಲ್ಲಿ ಮಾಹಿತಿ ಇಲ್ಲ ದನವನ್ನು ಮಾರಾಟ ಮಾಡುವುದೇ ಸ್ಥಳವನ್ನು ಜಪ್ತಿ ಮಾಡುವಂತಹ ಅಪರಾಧವಾದರೆ ರೈತರನೆ ಜಮೀನುಗಳನ್ನು ಮುಟ್ಟುಗೋಲು ಹಾಕಬೇಕಾಗುತ್ತದೆ ಎಂದು ಎಂದು ಮನವಿಯಲ್ಲಿ ಮಾಹಿತಿ ನೀಡಲಾಗಿದೆ.
ನ.6 ರಂದೆ ನೀಟೀಸ್ ನೀಡಿ ಕನಿಷ್ಟ ಸ್ಪಷ್ಟನೆ ನೀಡಲು ಸಮಯಾವಕಾಶ ನೀಡದೆ ಅದೇ ದಿನ ವಾಸದ ಮನೆಯನ್ನು ಮುಟ್ಟುಗೋಲು ಹಾಕುವ ಕಾರ್ಯವನ್ನು ಪೊಲೀಸರು ಮಾಡುದದ್ದಾರೆ . ಮುಟ್ಟುಗೋಲು ಹಾಕಿದ ಮನೆಯಲ್ಲಿ ಯಾವ ತರದ ಅಕ್ರಮ ವ್ಯವಹಾರಗಳು ನಡೆದಿರುವುದಿಲ್ಲ ಹೀಗಿರುವಾಗ ಮೂವರು ಮಕ್ಕಳು ಹಾಗೂ ಮೃದ್ದ ತಾಯಿಯೊಂದಿಗೆ ಮಹಿಳೆಯೊಬ್ಬರು ವಾಸಿಸುತ್ತಿರುವ ಮನೆಯನ್ನು ಮುಟ್ಟುಗೋಲು ಹಾಕಿರುವ ಕ್ರಮವನ್ನು ಹಿಂಪಡೆದು ಮಾನವೀಯ ನೆಲೆಯಲ್ಲಿ ಈ ಕುಟುಂಬಕ್ಕೆ ವಾಸಿಸಲು ಮನೆಯನ್ನು ಬಿಟ್ಟು ಕೊಡಲು ಮನವಿಯಲ್ಲಿ ವಿನಂತಿಸಲಾಗಿದೆ.
