ಬೆಳ್ತಂಗಡಿ: ತಾಲೂಕಿನಲ್ಲಿ ಬೆಳ್ತಂಗಡಿ ಹಾಗೂ ಉಜಿರೆ ಎರಡು ಸಬ್ ಡಿವಿಜನ್ ಗಳಿದ್ದು ಇಲ್ಲಿ ಸಾಕಷ್ಟು ಗ್ರಾಹಕರು ಇದ್ದಾರೆ. ಈಗ ಇದು ಬಂಟ್ವಾಳ ವಿಭಾಗದ ವ್ಯಾಪ್ತಿಗೆ ಬರುತ್ತಿದೆ. ಈ ಹಿನ್ನಲೆಯಲ್ಲಿ ಎರಡು ಸಬ್ ಡಿವಿಜನ್ ಗಳನ್ನು ಸೇರಿಸಿ ಬೆಳ್ತಂಗಡಿ ಡಿವಿಜನ್ ಅನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಇದೂ ಬೇಗ ಮಂಜೂರಾಗಲಿದೆ ಇದರಿಂದ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಲಿದೆ ಎಂದು ಮಂಗಳೂರು ಮೆಸ್ಕಾಂ ಅದ್ಯಕ್ಷ ಕೆ ಹರೀಶ್ ಕುಮಾರ್ ಹೇಳಿದರು. ಅವರು ಗುರುವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಮಂಗಳೂರು ಮೆಸ್ಕಾಂ ರಾಜ್ಯದಲ್ಲಿ ಉತ್ತಮ ಸೇವೆ ನೀಡುವ ಹೆಗ್ಗಳಿಕೆಗೆ ಪಾತ್ರವಾಗಿದ್ದು ರಾಜ್ಯದ 5 ವಿದ್ಯುತ್ ವಿಭಾಗಗಳಲ್ಲಿ ಮೆಸ್ಕಾ ಲಾಭದಲ್ಲಿದೆ. ಸರಕಾರ ಈಗಾಗಲೆ ಗೃಹಜ್ಯೋತಿ ಯೋಜನೆಯ ಎಲ್ಲ ಬಿಲ್‌ಗಳನ್ನು ಮೆಸ್ಕಾಂಗೆ ಪಾವತಿಸಿದೆ ಎಂದು ತಿಳಿಸಿದರು ರಾಜ್ಯದಲ್ಲಿ ವಿದ್ಯುತ್ ಗೆ ಕೊರತೆ ಇಲ್ಲ. ಕೆಲವೊಂದು ತಾಂತ್ರಿಕ ಅಡಚಣೆಯಿಂದ ಬಳಕೆದಾರರಿಗೆ ವ್ಯತ್ಯಯನಗಳು ಬರಬಹುದೆ ಹೊರತು ವಿದ್ಯುತ್ ಕೊರತೆಯಿಂದ ಸಮಸ್ಯೆ ಬರಲಾರದು ಎಂದರು. ಲೈನ್ ಮ್ಯಾನ್ ಸಿಬ್ಬಂದಿಗಳ ಕೊರತೆ ಇದೆ. ಈಗಾಗಲೆ ಮೆಸ್ಕಾಂ ವಿಭಾಗಕ್ಕೆ 400 ಲೈನ್ ಮ್ಯಾನ್ ಗಳ ನೇಮಕವಾಗಿದೆ ಆದರೆ 390 ಲೈನ್ ಮ್ಯಾನ್ ಗಳು ವರ್ಗಾವಣೆ ಅಗುತ್ತಿದ್ದಾರೆ ಎಂದರು. ತಾಲೂಕಿನಲ್ಲಿ 4967 ಟ್ರಾನ್ಸ್ ಪಾರ್ಮರ್ ಗಳಿದ್ದು ಹೆಚ್ಚುವರಿ 1000 ಟ್ರಾನ್ಸ್ ಪಾರ್ಮರ್ಗಳ ಅಗತ್ಯವಿದೆ. ವಿವಿಧ ಕಾಮಗಾರಿಯಲ್ಲಿ 12.72 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ ಎಂದರು. ಪ.ಜಾತಿ ,ಪಂಗಡಗಳ ಕಾಲೋನಿ ಅಬಿವ್ರುದ್ದಿಗೆ 4.5 ಕೋಟಿ ಅಂದಾಜು ವೆಚ್ಚ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಕುತ್ಲೂರು, ಕಕ್ಕಿಂಜೆಯಲ್ಲಿ ಹೊಸ 110 ಕೆ.ವಿ ಸಬ್ ಸ್ಟೇಶನ್ ಗಳು ನಿರ್ಮಾಣವಾಗುತ್ತಿದೆ ಬೆಳ್ತಂಗಡಿ ನಗರಕ್ಕೆ ಪ್ರತ್ಯೇಕ ಫೀಡರ್ ಅಗುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಕಾಮಗಾರಿ ಸ್ವಲ್ಪ ವಿಳಂಬವಾಗುತ್ತಿದೆ ಎಂದರು ಶೀಘ್ರವಾಗಿ ಇದು ಮುಗಿಯಲಿದ್ದು ಬಳಿಕ ನಗರದ ವಿದ್ಯುತ್ ಸಮಸ್ಯೆ ಪರಿಹಾರವಾಗಲಿದೆ ಎಂದರು. ಯಾವುದೇ ಸಮಸ್ಯೆ ಬಂದರು ನಿವಾರಿಸಲು ಮೆಸ್ಕಾಂ ಸಿದ್ದವಾಗಿದ್ದು ಸಿಬ್ಬಂದಿಗಳು ಜನ ಸಾಮಾನ್ಯರೊಂದಿಗೆ ಉತ್ತಮ ಬಾಂದವ್ಯದಿಂದ ಇರುವಂತೆ ಸೂಚಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅದ್ಯಕ್ಷ ಪದ್ಮನಾಭ ಸಾಲ್ಯಾನ್, ಜಿ.ಪಂ ಮಾಜಿ ಸದಸ್ಯ ಶೇಖರ್ ಕುಕ್ಕೆಡಿ ಉಪಸ್ಥಿತರಿದ್ದರು.
