ಬೆಳ್ತಂಗಡಿ; ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅಭಿಷಕ್ತರಾದ ಅ ವಂ ಜೇಮ್ಸ್ ಪಟ್ಟೇರಿಲ್ ಅವರನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪರವಾಗಿ ಅಭಿನಂದಿಸಲಾಯಿತು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿನ್ಸಂಟ್ ಪಯಸ್, ಧರ್ಮಸ್ಥಳ ಡಿ.ಎಂ.ಸಿ ವಿಭಾಗದ ಟಿ.ವಿ ದೇವಸ್ಯ ಹಾಗು ಉಜಿರೆ ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಅವರು ಶಾಲು ಹೊದಿಸಿ ಫಲಪುಷ್ಪನೀಡಿ ಸನ್ಮಾನಿಸಿದರು.
ಎಸ್.ಡಿ.ಎಂ ಆಸ್ಪತ್ರೆ ಉಜಿರೆ ಇದರ ವತಿಯಿಂದ ಮ್ಯಾನೇಜಿಂಗ್ ಡೈರೆಕ್ಟರ್ ಜನಾರ್ಧನ್ ಹಾಗೂ ಇತರರು ನೂತನ ಬಿಷಪ್ ಅವರನ್ನು ಸನ್ಮಾನಿಸಿದರು.










