Home ಸ್ಥಳೀಯ ಸಮಾಚಾರ ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ರಾದಾ ಅ ವಂ ಜೇಮ್ಸ್ ಪಟ್ಟೇರಿಲ್ ಅವರ ಪಟ್ಟಾಭಿಷೇಕ

ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ರಾದಾ ಅ ವಂ ಜೇಮ್ಸ್ ಪಟ್ಟೇರಿಲ್ ಅವರ ಪಟ್ಟಾಭಿಷೇಕ

0


ಬೆಳ್ತಂಗಡಿ ಧರ್ಮಪ್ರಾಂತ್ಯದ ಧ್ವಿತೀಯ ಧರ್ಮಾಧ್ಯಕ್ಷರಾಗಿ ಅತೀ ವಂದನೀಯ ಜೇಮ್ಸ್ ಪಟ್ಟೇರಿಲ್ ರವರು ಇಂದು ಪಟ್ಟಾಭಿಶಕ್ತರಾಗಿದ್ದಾರೆ. ಸೀರೋ ಮಲಬಾರ್ ಕಥೋಲಿಕ ಧರ್ಮಸಭೆಯ ಮಹಾ ಧರ್ಮಾಧ್ಯಕ್ಷರಾದ ಅತೀ ವಂದನೀಯ ರಾಫೇಲ್ ತಟ್ಟಿಲ್ ರವರು ಮುಖ್ಯ ಅರ್ಚಕರಾಗಿ, ಆರ್ಚ್ ಬಿಷಪ್ ಅತೀ ವಂದನೀಯ ಜೋಸೆಫ್ ಪಾಮ್ಪ್ಲಾನಿ ತಲಶೇರಿ ಮೆಟ್ರೋ ಪೊಲಿಟನ್ ಧರ್ಮಪ್ರಾಂತ್ಯ ರವರ ಹಾಗು ಭಾರತದ ವಿವಿಧ ಕಡೆಗಳಿಂದ ಆಗಮಿಸಿದ ನಲವತ್ತ ನಾಲ್ಕು ಧರ್ಮಾಧ್ಯಕ್ಷರ ಪುಣ್ಯಸಾನಿಧ್ಯದಲ್ಲಿ ಪಟ್ಟಾಭಿಷೇಕವು ನೆರವೇರಿತು. ಭಾರತದ ವಿವಿಧ ಕಡೆಗಳಿಂದ ನಾನೂರಕ್ಕೂ ಮಿಕ್ಕಿ ಧರ್ಮಗುರುಗಳು, ಧರ್ಮ ಭಗಿನಿಯರು ಮತ್ತು ನಾಲ್ಕು ಸಾವಿರಕ್ಕೂ ಮೀರಿದ ಕ್ರೈಸ್ತಬಾಂದವರು ಪಾಲ್ಗೊಂಡರೂ.
ಪಟ್ಟಾಭಿಷೇಕದ ನಂತರದ ಸಾರ್ವಜನಿಕ ಸಮ್ಮೇಳನದಲ್ಲಿ ನೂತನ ಧರ್ಮಾಧ್ಯಕ್ಷರಿಗೆ ಅಭಿನಂದನೆಗಳು ಹಾಗು ನಿವೃತ್ತರಾಗುವ ಅತೀ ವಂದನೀಯ ಲಾರೆನ್ಸ್ ಮುಕ್ಕುಯಿಯವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಸಮ್ಮೇಳನದಲ್ಲಿ ಮಾತನಾಡಿದ ಭಾರತ ಕಥೋಲಿಕ ಧರ್ಮಧ್ಯಾಕ್ಷರುಗಳ ಸಮ್ಮೇಳನದ ಅಧ್ಯಕ್ಷರಾದ ಅತೀ ವಂದನೀಯ ಆಂಡ್ರೂಸ್ ಥಾಯತ್,”ಅತೀ ವಂದನೀಯ ಜೇಮ್ಸ್ ರವರು ಜನಹಿತ ಕೆಲಸಗಳನ್ನು ಮಂಚೂಣಿಯಲ್ಲಿ ಇರುವವರು, ಇದರಿಂದ ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕೆ ಈ ನಾಡಿಗೆ ಒಳಿತಾಗುವುದು ಖಚಿತ” ಎಂದರು. “ಕಳೆದ 26ವರ್ಷಗಲ್ಲಿ ಮಾಡಿದ ಅತ್ಯಂತ ಕಠಿಣ ಸಮಯದಲ್ಲಿ ತ್ಯಾಗ ಪ್ರೀತಿ ನಿಷ್ಠೆಯಿಂದ ಮಾಡಿದ ಸೇವೆ ಬಣ್ಣಿಸಲು ಅಸಾಧ್ಯ” ಎಂದು ಆಂಡ್ರಿಯಾ ಫ್ರಾನ್ಸಿಯಾ ಹೇಳಿದರು. ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಗಳಾದರು.

NO COMMENTS

LEAVE A REPLY

Please enter your comment!
Please enter your name here

Exit mobile version