Home ಸ್ಥಳೀಯ ಸಮಾಚಾರ ಜಮೀಯ್ಯತುಲ್ ಪಲಾಹ್ ಬೆಳ್ತಂಗಡಿ ವತಿಯಿಂದ ಪ್ರತಿಭಾ ಪುರಸ್ಕಾರ, 3 ಲಕ್ಷ‌ ರೂ. ವಿದ್ಯಾರ್ಥಿವೇತನ ವಿತರಣೆ

ಜಮೀಯ್ಯತುಲ್ ಪಲಾಹ್ ಬೆಳ್ತಂಗಡಿ ವತಿಯಿಂದ ಪ್ರತಿಭಾ ಪುರಸ್ಕಾರ, 3 ಲಕ್ಷ‌ ರೂ. ವಿದ್ಯಾರ್ಥಿವೇತನ ವಿತರಣೆ

0

ಬೆಳ್ತಂಗಡಿ; ವಿದ್ಯಾರ್ಥಿಯು ಕಲಿಕಾ ವೇಳೆಯಲ್ಲಿ ಪುಸ್ತಕ ಮತ್ತು ಬೋರ್ಡ್‌ನೆಡೆಗೆ ತೀಕ್ಷ್ಣವಾದ ಕಣ್ಣು, ಗ್ಯಾಹ್ಯವಾದ ಕಿವಿ ಮತ್ತು ಕೇಂದ್ರೀಕರಿಸುವ ಮಿದುಳಿನ ಮೂಲಕ ಪೂರ್ಣವಾಗಿ ಅರ್ಪಿಸಿಕೊಂಡು ಅಧ್ಯಯನ ಮಾಡಿದರೆ ಯಶಸ್ಸು ಖಂಡಿತಾ. ಆದ್ದರಿಂದ ಯಾವತ್ತೂ ಕೂಡ ಮೊಬೈಲ್ ಮೂಲಕ ರೀಲ್ಸ್‌ಗಳ ದಾಸರಾಗದೆ ಚೆನ್ನಾಗಿ ಓದಿ ರಿಯಲ್ ಹೀರೋಗಳಾಗಿ ಎಂದು ಖ್ಯಾತ ಸಂಪನ್ಮೂಲ ವ್ಯಕ್ತಿ, ಪುತ್ತೂರು ಕೊಂಬೆಟ್ಟು ಪ.ಪೂ ಕಾಲೇಜು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಹೇಳಿದರು.

ಜಮೀಯ್ಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಮಾಹಿತಿ ಸಂಪನ್ಮೂಲ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿತ್ತಿದ್ದರು.

ಕಾರ್ಯಕ್ರಮದ ಆದ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಖಾಲಿದ್ ಪುಲಾಬೆ ವಹಿಸಿದ್ದು, ಸಿಕ್ಕಿದ ವಿದ್ಯಾರ್ಥಿ ವೇತನವನ್ನು ಶಿಕ್ಷಣದ ಉದ್ದೇಶಕ್ಕೇ ವ್ಯಯಿಸಿ ಎಂದರು.

ಮುಖ್ಯ ಅತಿಥಿಯಾಗಿ ಜಮ್ಯೀತುಲ್ ಪಲಾಹ್ ದ.ಕ. ಜಿಲ್ಲಾ ಅಧ್ಯಕ್ಷ ಅಶ್ಫಕ್ ಅಹಮದ್, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ, ತಾ. ಘಟಕದ ಗೌರವಾಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಸಂದರ್ಭೋಚಿತವಾಗಿ ಮಾತನಾಡಿದರು.
ಪೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮುಹಮ್ಮದ್ ರಿಯಾಝ್ ಕೊಕ್ರಾಡಿ,
ಕಾರ್ಯದರ್ಶಿ ಉಮರ್ ಅಹಮ್ಮದ್ ಬೆಳ್ತಂಗಡಿ ವೇದಿಕೆಯಲ್ಲಿದ್ದರು.

ಅಬ್ಬೋನು ಮದ್ದಡ್ಕ, ಅಕ್ಬರ್ ಬೆಳ್ತಂಗಡಿ, ಬಿ.ಶೇಖುಂಞಿ, ಉಮರ್ ಕುಂಞ್ಞ ನಾಡ್ಜೆ, ಯು.ಹೆಚ್ ಮುಹಮ್ಮದ್ ಉಜಿರೆ, ಕೆ. ಎಸ್ ಅಬೂಬಕ್ಕರ್, ಸಯ್ಯದ್ ಹಬೀಬ್ ಸಾಹೇಬ್, ಕೆ. ಎಸ್ ಅಬ್ದುಲ್ಲಾ, ಇಲ್ಯಾಸ್ ಕರಾಯ, ಅಬ್ದುಲ್ ರಝಾಕ್ ಡಿ.ಡಿ, ಸಯ್ಯದ್ ಎಸ್.ಎಂ ತಂಙಳ್ ಉಜಿರೆ, ಅಬ್ಬಾಸ್ ಮದ್ದಡ್ಕ, ಕಾಸಿಂ ಪದ್ಮುಂಜ, ಅಶ್ರಫ್ ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ, ಕಾನೂನು ಪದವಿ ಪೂರ್ತಿಗೊಳಿಸಿದ ಪಡಂಗಡಿಯ ಇರ್ಫಾನ್ ಡಿ.ಡಿ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ – ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಐವರು ಸಮುದಾಯದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಒಟ್ಟು117 ವಿದ್ಯಾರ್ಥಿಗಳಿಗೆ 3 ಲಕ್ಷ ರೂ. ಶೈಕ್ಷಣಿಕ ನಿಧಿ‌ ಹಸ್ತಾಂತರಿಸಲಾಯಿತು.

ಅಬ್ದುಲ್ ಲತೀಫ್ ಸಾಹೇಬ್ ಕಿರಾಅತ್ ಪಠಿಸಿದರು. ಜೊತೆ ಕಾರ್ಯದರ್ಶಿ ಆಲಿಯಬ್ಬ ಪುಲಾಬೆ ಸ್ವಾಗತಿಸಿ ಪ್ರಸ್ತಾವನೆಗೈದರು.
ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.
ಕೋಶಾಧಿಕಾರಿ ಇಬ್ರಾಹಿಂ ಮುಸ್ಲಿಯಾರ್ ವಂದಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version