Home ರಾಜಕೀಯ ಸಮಾಚಾರ ಸರಕಾರವೇ ರೈತರ ಭಕ್ಷಣೆ ಮಾಡುವುದು ಅತಿರೇಕದ ವರ್ತನೆ; ಒಕ್ಕಲೆಬ್ಬಿಸಿದ ಕುಟುಂಬಕ್ಕೆ ಕೂಡಲೇ ಪರಿಹಾರ ಒದಗಿಸಿ ಸಿಪಿಐಎಂ...

ಸರಕಾರವೇ ರೈತರ ಭಕ್ಷಣೆ ಮಾಡುವುದು ಅತಿರೇಕದ ವರ್ತನೆ; ಒಕ್ಕಲೆಬ್ಬಿಸಿದ ಕುಟುಂಬಕ್ಕೆ ಕೂಡಲೇ ಪರಿಹಾರ ಒದಗಿಸಿ ಸಿಪಿಐಎಂ ಒತ್ತಾಯ

0


ಬೆಳ್ತಂಗಡಿ; ಕುದುರೇಮುಖ ರಾಷ್ಟ್ರೀಯ ಉದ್ಯಾನವನದಿಂದ ಅರಣ್ಯವಾಸಿ ಬಡ ರೈತ ಕುಟುಂಬಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಅರಣ್ಯ ಇಲಾಖೆ ಮುಂದಾಗಿದ್ದು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕುದುರೇಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ನಿವಾಸಿ ಪಿ.ಟಿ ಜೋಸೆಫ್ ಹಾಗೂ ಅವರ ಕುಟುಂಬವನ್ನು ಅಕ್ಟೋಬರ್ 31ರಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಪೋಲೀಸ್ ಬೆದರಿಕೆಯೊಂದಿಗೆ ಒಕ್ಕೆಲಬ್ಬಿಸಿದ್ದು ಅವರ ಕೃಷಿಯನ್ನು ಮತ್ತು ವಾಸದ ಮನೆಯನ್ನು ಸಂಪೂರ್ಣವಾಗಿ ನಾಶ ಪಡಿಸಿರುವುದು ಅತ್ಯಂತ ಖಂಡನೀಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಐದು ದಶಕದಿಂದಲೂ ಇಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ನೀಡಲಾಗಿದ್ದ ಹಕ್ಕು ಪತ್ರವನ್ನು ರದ್ದುಪಡಿಸಿದ ಸರಕಾರ ಇದೀಗ ಯಾವುದೇ ಕನಿಷ್ಟ ಪರಿಹಾರನ್ನೂ ನೀಡಿದೆ ಏಕಾಏಕಿ ಒಕ್ಕಲೆಬ್ಬಿಸಿ ಅವರ ಮನೆ ಹಾಗೂ ಕೃಷಿ ಭೂಮಿಯಿಂದ ಹೊರಗೆ ಹಾಕಿರುವುದು ಸರಿಯಲ್ಲ. ಈ ಕುಟುಂಬ ಈಗ ಬೀದಿಪಾಲಾದಂತಾಗಿದೆಇವರು ಕಳೆದ 50ರ‍್ಷಗಳಿಂದ ಬದುಕಿದ್ದ ಮನೆಯನ್ನು ನಾಶಪಡಿಸಲಾಗಿದ್ದು ಸುಮಾರು ಎರಡು ಎಕ್ರೆ ಜಾಗದಲ್ಲಿದ್ದ ಫಲಕೊಡುವ ಅಡಿಕೆ ಮರಗಳನ್ನು ತೆಂಗಿನ ಮರಗಳನ್ನು ಹಾಗೂ ಇತರ ಕೃಷಿಯನ್ನು ನಾಶಪಡಿಸಿರುವುದು ಖಂಡನೀಯವಾಗಿದೆ. ಇದು ಬಿಜೆಪಿ ಮತ್ತು ಕಾಂಗ್ರೇಸ್ ಸರಕಾರದ ರೈತ ವಿರೋದಿ ದೋರಣೆಯೇ ಆಗಿದೆ ಎಂದು ಟೀಕಿಸಿದ ಅವರು ತಕ್ಷಣ ಇವರಿಗೆ ಪುನರ್ವಸತಿ ಮತ್ತು ಪರಿಹಾರ ನೀಡಲು ಸಿಪಿಐಎಂ ಸರಕಾರವನ್ನು ಒತ್ತಾಯಿಸುತ್ತದೆ ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version