ಬೆಳ್ತಂಗಡಿ: ಒಂದೆಡೆ ಎಸ್.ಐ.ಟಿ ತನಿಖೆಗೆ ಸಂಬಂದಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿದ್ಧರೆ ಮತ್ತೊಂದೆಡೆಯಿಂದ ತನಿಖೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಗಳು ಲಭ್ಯವಾಗುತ್ತಿದ್ದು ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ಧರ್ಮಸ್ಥಳ ಗ್ರಾಮಪಂಚಾಯತಿನಿಂದ ಪಡೆದಿರುವ ಮಾಹಿತಗಳು ಹಾಗೂ ಪೊಲೀಸ್ ಠಾಣೆಯಿಂದ ಲಭಿಸುತ್ತಿರುವ ಮಾಹಿತಿಗಳು ತಾಳೆಯಾಗುತ್ತಿಲ್ಲ ಎಂಬ ಮಾಹಿತಿಗಳು ಎಸ್.ಐ.ಟಿ ಮೂಲದಿಂದ ವ್ಯಕ್ತವಾಗುತ್ತಿದೆ.
ಆರಂಭದಲ್ಲಿ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿಗಳು ಪೊಲೀಸ್ ಇಲಾಖೆಯಿಂದ ಲಭ್ಯವಾಗಿರಲಿಲ್ಲ. ಸಾಕಷ್ಟು ಹುಡುಕಾಟದ ಬಳಿಕ ಒಂದಿಷ್ಟು ದಾಖಲೆಗಳು ಎಸ್.ಐ.ಟಿ ಗೆ ಲಭಿಸಿದ್ದರೂ ಇನ್ನೂ ಕೆಲವು ಪ್ರಕರಣಗಳ ಮಾಹಿತಿಗಳು ಎಸ್.ಐ.ಟಿ ಗೆ ಲಭ್ಯವಾಗಿಲ್ಲ ಎಂದು ಹಿರಿಯ ಅಧಿಕಾರಿಗಳ ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಬಿಎಲ್.ಆರ್ ಪೋಸ್ಟ್ ವಿಸ್ತಾರವಾದ ವರದಿಯನ್ನು ಪ್ರಸಾರ ಮಾಡಿತ್ತು.
ಗ್ರಾಮ ಪಂಚಾಯತ್ ನಿಂದ ಪಡೆದಿರುವ ಮಾಹಿತಿಯಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ದಾಖಲೆಗಳು ಲಭ್ಯವಾಗಿದೆ ಆದರೆ ಪೊಲೀಸ್ ಠಾಣೆಯಿಂದ ಇದಕ್ಕೆ ಸಂಬಂಧಿಸಿದ ಎಫ್.ಐ ಆರ್ ಗಳು ಲಭಿಸಿಲ್ಲ ಈ ಪ್ರಕರಣಗಳು ದಾಖಲಾಗಿದೆಯೇ ಎಂಬ ಬಗ್ಗೆ ದಾಖಲೆಗಳನ್ನು ಹುಡುಕುವ ಕಾರ್ಯವನ್ನು ಎಸ್.ಐ.ಟಿ ನಡೆಸುತ್ತಿದೆ.
ಗ್ರಾಮ ಪಂಚಾಯತಿನಲ್ಲಿ ಲಭಿಸಿರುವ ಮಾಹಿತಿಗಳಿಗೆ ಪೂರಕವಾದ ಮಾಹಿತಿ ಹಾಗೂ ಎಫ್.ಐ
ಆರ್ ಪತ್ತೆಯಾಗದಿದ್ದಲ್ಲಿ ಕಾನೂನು ಬಾಹಿರವಾಗಿ ಮೃತದೇಹಗಳನ್ನು ಹೂತಿರುವ ಬಗ್ಗೆ ಬಂದಿರುವ ಆರೋಪಗಳಿಗೆ ಮತ್ತಷ್ಟು ಮಹತ್ವ ಸಿಗುವ ಸಾಧ್ಯತೆಯಿದೆ.
ಚಿನ್ನಯ್ಯ ನೀಡಿರುವ ಹೇಳಿಕೆಯಲ್ಲಿ ಈತ ಹತ್ತು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿರುವುದಾಗಿ ಮಾಹಿತಿಗಳು ಲಭ್ಯವಾಗುತ್ತಿದ್ದು ಈತ ಹೂತು ಹಾಕಿರುವುದಾಗಿ ಹೇಳುತ್ತಿರುವ ಮೃತದೇಹಗಳ ಬಗ್ಗೆಯೂ ಎಸ್.ಐ.ಟಿ ತಂಡದವರು ಹುಡುಕಾಟ ನಡೆಸುತ್ತಿದ್ದಾರೆ.
ಮಹತ್ವ ಪಡೆದ ಗ್ರಾಮಪಂಚಾಯತಿನ ಮಾಹಿತಿ
ಇಡೀ ಪ್ರಕರಣದಲ್ಲಿ ಧರ್ಮಸ್ಥಳ ಗ್ರಾಮಪಂಚಾಯತಿನಿಂದ ಲಭಿಸಿದ ಮಾಹಿತಿಗಳೆ ಅತ್ಯಂತ ಮಹತ್ವದ್ದಾಗಿದೆ. ಎಸ್.ಐ.ಟಿ ರಚನೆಯಾಗುವ ಮೊದಲೇ ಗ್ರಾಮಪಂಚಾಯತಿನ ಆಡಳಿತ ಮಂಡಳಿಯವರು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಬಳಿ ಮೃತದೇಹಗಳನ್ನು ಹೂತು ಹಾಕಿರುವ ಎಲ್ಲ ದಾಖಲೆಗಳಿವೆ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲಿಯೇ ಹೋರಾಗಾರರು ಗ್ರಾಮಪಂವಾಯತಿನದ ಮಾಹಿತಿ ಹಕ್ಕಿನ ಅಡಿಯಲ್ಲಿ ದಾಖಲೆಗಳನ್ನು ಪಡೆದುಕೊಂಡಿದ್ದರು. ಬಳಿಕ ಎಸ್.ಐ.ಟಿ ತಂಡ ಗ್ರಾಮ ಪಂಚಾಯತಿನಿಂದ ಎಲ್ಲ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ದಾಖಲೆಗಳನ್ನು ಮುಂದಿಟ್ಟುಕೊಂಡೇ ಹೋರಾಟಗಾರರು ಹಲವಾರು ಹೇಳಿಕೆಗಳನ್ನು ನೀಡಿದ್ದರು. ಹಾಗೂ ಅದರ ಬಗ್ಗೆ ತನಿಖೆಗೆ ಒತ್ತಾಯಿಸಿದ್ದರು. ಇದೀಗ ಇದೇ ದಾಖಲೆಗಳನ್ನು ಮುಂದಿಟ್ಟು ಎಸ್.ಐ.ಟಿ ಅಧಿಕಾರಿಗಳು ತನಿಖೆ ಮುಂದುವರಿಸುತ್ತಿರುವುದಾಗಿ ತಿಳಿದು ಬಂದಿದೆ.









