ಬೆಳ್ತಂಗಡಿ: ಎಳೆಯ ವಯಸ್ಸಿನಲ್ಲಿಯೇ ರಾಜಕೇಸರಿ ಸಂಘಟನೆಯ ಮೂಲಕ ಸಮಾಜ ಸೇವೆ ಮಾಡುತ್ತಾ ಬಂದಿರುವ ಬೆಳ್ತಂಗಡಿ ನಗರ ರೆಂಕೆದಗುತ್ತು ದೀಪಕ್ ಜೀ ಯವರಿಗೆ 2025-26 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಕುಡಿಯುವ ನೀರಿನ ಬಾಟಲ್ ಮಾರಿ ನೊಂದ ಕುಟುಂಬಗಳಿಗೆ ನೆರವು, ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರ, ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ಬ್ಯಾಗ್, ಪೆನ್ನು ,ಪೆನ್ಸಿಲ್ ವಿತರಣೆ, ಶಾಲಾ ಶೌಚಾಲಯ ಸ್ವಚ್ಚತೆ, ಗಿಡ ನೆಡುವ ಕಾರ್ಯಕ್ರಮ, ಉಚಿತ ಸಾಮೂಹಿಕ ವಿವಾಹ, ಸರಕಾರಿ ಅಸ್ಪತ್ರೆಗಳ ಆವರಣ ಸ್ವಚ್ಚತೆ, ಬಡ ರೋಗಿಗಳಿಗೆ ನೆರವು, ಬಡವರಿಗೆ ಮನೆ ನಿರ್ಮಾಣ ಸೇರಿದಂತೆ ಅನೇಕ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸೇವೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ

 
            

