ಬೆಳ್ತಂಗಡಿ: ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ಅದಿಕಾರವಿದ್ದರು ಕೆಲವೊಂದು ವಿಷಯದಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿದ್ದರು ಸಲಹೆ ಸೂಚನೆಗಳನ್ನು ಕೊಡುತ್ತಾ ಉತ್ತಮ ಆಡಳಿತ ನಡೆಸಲು ನೆರವಾಗುತ್ತಾ ಬಂದಿದ್ದೇನೆ ರಾಜಕೀಯ ಹಾಗೂ ಸಮಾಜ ಸೇವೆಗಾಗಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ ಆದರ ಈಗ ನನಗೆ ಭ್ರಷ್ಟಾಚಾರದ ಪಟ್ಟ ಕಟ್ಟುವ ಕಾರ್ಯಕ್ಕೆ ಪಟ್ಟಣ ಪಂಚಾಯತು ಅಧ್ಯಕ್ಷರು ಮುಂದಾಗಿದ್ದಾರೆ. “ನನ್ನ ಎಲ್ಲ ಸಾಲಗಳನ್ನೂ ತೀರಿಸುತ್ತೇನೆ ಪಕ್ಷಕ್ಕೆ ಬನ್ನಿ” ಎಂದು ಮನೆ ಏಲಂಗೆ ಬಂದಾಗ ಬೆಳ್ತಂಗಡಿ ಶಾಸಕರು ಹೇಳಿದ್ದರು ಆದರೆ ಪಕ್ಷ ನಿಷ್ಠೆ ಮತ್ತು ಸಿದ್ದಾಂತದ ಮೇಲಿನ ನಿಷ್ಠೆಯಿಂದ ಅದನ್ನು ತಿರಸ್ಕರಿಸಿ ಮುಂದುವರಿದಿದ್ದೇನೆ ಎಂದು ಬೆಳ್ತಂಗಡಿ ಪಟ್ಟಣ ಪಂಚಾಯತಿನ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ ಮುಖಂಡ ಜಗದೀಶ್ ಡಿ ಹೇಳಿದ್ದಾರೆ.
ಬೆಳ್ತಂಗಡಿ_ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು.
ಪಟ್ಟಣ ಪಂಚಾಯತು ಅಧ್ಯಕ್ಷ ಜಯಾನಂದ ಗೌಡ ಅವರು ನನ್ನನ್ನು ಭ್ರಷ್ಟ, ಬ್ರೋಕರ್ ಕೆಲಸ ಮಾಡುವವ ಎಂದು ಕರೆದಿದ್ದಾರೆ ನನ್ನ 24 ವರ್ಷದ ರಾಜಕೀಯ ಜೀವನದಲ್ಲಿ ಪತ್ನಿ ಮಕ್ಕಳಿಗೆ ಒಂದು ರೂ ಸಹಾಯಮಾಡಲು ನನಗೆ ಸಾದ್ಯ ಅಗಲಿಲ್ಲ ಇದ್ದ ಮನೆಯನ್ನು ಕಳೆದುಕೊಂಡಿದ್ದೇನೆ ಭ್ರಷ್ಟನಾಗಿದ್ದರೆ ನನಗೆ ಈ ಸ್ಥಿತಿ ಬರುತ್ತಿತ್ತೇ ಎಂದು ಪ್ರಶ್ನಿಸಿದ ಅವರು ತಾನು ರಾಜಕೀಯದಿಂದ ಏನು ಮಾಡಿಕೊಂಡಿದ್ದೇನೆ ಏನೆಲ್ಲ ಕಳೆದುಕೊಂಡಿದ್ದೇನೆ ಎಂದು ಬೆಳ್ತಂಗಡಿ ಪಟ್ಟಣದ ಜನರಿಗೆ ತಿಳಿದಿದೆ ಎಂದರು.
ಬಸ್ ನಿಲ್ದಾಣ ಬಳಿ, ಚರ್ಚ್ ರೋಡ್ ಬಳಿ ಹಾಕಲಾಗಿದ್ದ ಹಳೆ ಇಂಟರ್ ಲಾಕ್ ನ್ನು ಕಾನೂನು ಬದ್ದವಾಗಿ ಯಾರಿಗೆ ಬೇಕಾದರೆ ಕೊಡಬಹುದು ಎಂದಿದ್ದೆ ಅದೇ ರೀತಿ ಹಳೆ ಬಸ್ ನಿಲ್ದಾಣದ ಕಟ್ಟಡ ಹಳೆಸಾಮಾಗ್ರಿಗಳನ್ನು ಕೂಡ ಅದೇ ರೀತಿ ಮಾಡಿ ಯಾವುದಕ್ಕು ಬಳಸಬಹುದು ಎಂದಿದ್ದೆ ಇದಕ್ಕೆ ಅದ್ಯಕ್ಷ ಜಯಾನಂದ ಗೌಡ ಬೆಲೆ ಕೊಡಲಿಲ್ಲ ಎಲ್ಲ ಕಾನೂನುಗಳನ್ನು ಗಾಳಿಗೆತೂರಿ ಹಳೆ ಕಟ್ಟಡದ ಸೊತ್ತುಗಳನ್ನು ಸಾಗಾಟ ಮಾಡಿದ್ದಾರೆ ಎಂದು ಆರೋಪಿಸಿದ ಅವರು ಸರಕಾರದ ಸ್ವತ್ತುಗಳನ್ನು ದುರ್ಬಳಕೆ ಮಾಡುವುದು ಅಪರಾದವಾಗುತ್ತದೆ ಇದನ್ನು ಪ್ರಶ್ನಿಸಿದ ಕಾರಣಕ್ಕೆ ಇದೀಗ ಭ್ರಷ್ಟಾಚಾರ ಹಣೆಪಟ್ಟಿ ಕಟ್ಟುತ್ತಾರೆ ಎಂದು ಅರೋಪಿಸಿದರು. ನನಗೆ ಸಾಮಾಜಿಕ ಜಾಲಾತಾಣದಲ್ಲಿ ಬರೆಯಲು ಇಂದಿಗೂ ಗೊತ್ತಿಲ್ಲ, ನಾನು ಯಾರನ್ನು ಗುರಿಯಾಗಿ ಮಾತನಾಡಿದವ ಅಲ್ಲ. ಪಟ್ಟಣ ಪಂಚಾಯತಿನ ಹಳೆ ಸಾಮಾಗ್ರಿಗಳನ್ನು ರಾತ್ರಿ ವೇಳೆ ಸಾಗಿಸಿದರು ಎಂದು ಸಾಮಾಜಿಕ ಜಾಲಾ ತಾಣದಲ್ಲಿ ಹಾಕಿದ ಬಗ್ಗೆ ನನ್ನ ಮೇಲೆ ಅರೋಪಿಸಿದ್ದಾರೆ ಎಂದರು.
ಬಿ ಖಾತಾ ಬಗ್ಗೆ ಜನರಿಗೆ ಗೊಂದಲ ಇರುವುದರಿಂದ ಅವರಿಗೆ ನೆರವು ಮಾಡುತ್ತಿದ್ದೇನೆ ಅದಕ್ಕು ಬ್ರೋಕರ್ ಪಟ್ಟ ಕಟ್ಟಿದ್ದಾರೆ. ನಾನು ಬ್ರೊಕರ್ ಕೆಲಸ ಮಾಡಿ ಹಣ ಮಾಡಿದ್ದರೆ ನನ್ನ ಮನೆ ಎಲಂ ಅಗುತ್ತಿರಲಿಲ್ಲ. ಪತ್ನಿಯ ಮಾಂಗಲ್ಯ ಸರ ಬ್ಯಾಂಕ್ ನಲ್ಲಿ ಇರುತ್ತಿರಲಿಲ್ಲ ಎಂದರು.
2023 ರ ಚುನಾವಣಾ ಸಂದರ್ಭದಲ್ಲಿ ನನ್ನ ಮನೆ 29 ಲಕ್ಷಕ್ಕೆ ಹರಾಜಿಗೆ ಬಂದಿತ್ತು ಆ ಸಂದರ್ಭದಲ್ಲಿ ಈಗಿನ ಶಾಸಕರು ಎಲ್ಲಾ ಸಾಲ ತೀರಿಸಲು ಮುಂದೆ ಬಂದಿದ್ದರು. ನಮ್ಮ ಪಕ್ಷಕ್ಕೆ ಬನ್ನಿ ಎಲ್ಲ ಸಾಲ ತೀರಿಸುವಾ ಎಂದು ಹೇಳಿದ್ದರು.
ಆದರೆ ನಾನು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿದ್ದರಿಂದ ಈ ನೆರವನ್ನು ಪಡೆಯಲಿಲ್ಲ. ಆಗ ಇದನ್ನು ಪಡೆದಿದ್ದರೆ ನಾನು ಭ್ರಷ್ಟಾಚಾರಿ ಆಗುತ್ತಿದ್ದೆ. ಆದರೆ ನಾನು ಅದನ್ನು ಮಾಡಿಲ್ಲ ಆದ್ದರಿಂದ ಈಗಲೂ ಮನೆ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ಇದ್ದೇನೆ
ಆದರೆ ಶಾಸಕರು ಆ ಕಷ್ಟದ ಸಮಯದಲ್ಲಿ ನೀಡಿದ ಸ್ಪಂದನೆ ಮರೆಯುವುದಿಲ್ಲ ಎಂದರು.
ಆದರೆ ನನ್ನತಹ ವ್ಯಕ್ತಿಯ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದು ತುಂಬಾ ನೋವಿಗೆ ಕಾರಣವಾಯಿತು ಎಂದರು. ಇನ್ನು ಮುಂದೆಯು ಜನರ ಸೇವೆ ನಿಲ್ಲಿಸೋದಿಲ್ಲ ಮತ್ತು ಸರಕಾರದ ಹಣ ದುರುಪಯೋಗ ಆಗಲು ಬಿಡೋದಿಲ್ಲ. ಕಳಪೆ ಕಾಮಗಾರಿಗೆ ಆಸ್ಪದ ಕೊಡೊದಿಲ್ಲ ಎಂದರು. ನನಗೆ ಸಿಗುವ ಸಬೆಯ ಗೌರವ ದನವನ್ನು ಕೂಡ ಮನೆಗೆ ಕೊಡದೆ ಸುದೆಮುಗೇರು ಅಂಗನವಾಡಿ ಮಕ್ಕಳಿಗೆ ಮತ್ತು ಅಲ್ಲಿಯ ಅಬಿವೃದ್ದಿಗೆ ನೀಡುತ್ತಾ ಬಂದಿದ್ದೇನೆ. ಔಷದ ವ್ಯಾಪಾರಸ್ಥರ ಸಂಘದ ಬಗ್ಗೆ ನನ್ನ ಸೇವೆ ಬಗ್ಗೆ ಅದರ ಸದಸ್ಯರಿಗೆ ತಿಳಿದಿದೆ .ನನಗೆ ಸಮಯ ಇಲ್ಲದ ಕಾರಣ ದೂರ ಇದ್ದೇನೆ ಎಂದರು. ಗೋಷ್ಠಿಯಲ್ಲಿ ಪಟ್ಟಣ ಪಂಚಾಯತ್ ನಾಮನಿರ್ದೇಶನ ಸದಸ್ಯರಾದ ಹೆನ್ರಿ ಲೋಬೋ, ಸತೀಶ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಬಿ ಕೆ ವಸಂತ್, ಆಶ್ರಯ ಸಮಿತಿ ಸದಸ್ಯ ಜನಾರ್ದನ ಸುದೆಮುಗೇರು ಉಪಸ್ಥಿತರಿದ್ದರು.
