ಬೆಳ್ತಂಗಡಿ; ಬಿಜೆಪಿ ಯುವ ಮೋರ್ಚಾ ವತಿಯಿಂದ ದೀಪಾವಳಿ ದೋಸೆ ಹಬ್ಬ ಕಾರ್ಯಕ್ರಮಕ್ಕೆ ಸಂಭ್ರಮದ ಚಾಲನೆ ನೀಡಲಾಯಿತು.
ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ದೊಡ್ಡ ಬಳ್ಳಾಪುರದ ಶಾಸಕ ಧೀರಜ್ ಮುನಿರಾಜ್ ಅವರು ನೆರವೇರಿಸಿ ಮಾತನಾಡಿ ಶಾಸಕ ಹರೀಶ್ ಪೂಂಜ ಅವರು ತಾಲೂಕಿನ ಸಮಗ್ರವಾದ ಅಭಿವೃದ್ಧಿ ಗೆ ಶ್ರಮಿಸಿದ್ದಾರೆ. ಆರ್.ಎಸ್.ಎಸ್.ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಪ್ರಿಯಾಂಕಾ ಖರ್ಗೆ ಅವರು ಮಾತನಾಡುತ್ತಿದ್ದಾರೆ ಅವರು ಒಮ್ಮೆ ಸಂಘದ ಕಾರ್ಯಕ್ರಮಕ್ಕೆ ಬಂದರೆ ಅವರ ತಪ್ಪು ಕಲ್ಪನೆ ಹೋಗಬಹುದು ಎಂದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ ದೇಶಕಟ್ಟುವ ಕಾರ್ಯಕ್ಕೆ ಪ್ರಧಾನಿ ನರೇಂದ್ರಮೋದಿಯವರೊಂದಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ ತಾಲೂಕಿನ ಯುವಕರು ಸಂಘಟಿತರಾಗಿ ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಯನ್ನು ಗ್ರಾಮಮಟ್ಟದಿಂದ ಗೆಲ್ಲಿಸುವ ಕಾರ್ಯ ಮಾಡಬೇಕು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವು 50 ಸಾವಿರ ಮತಗಳ ಅಂತರದಲ್ಲಿರಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಯುವಮೋರ್ಚಾ ಮುಖಂಡ ಸಂದೀಪ್, ಮುಖಂಡರುಗಳಾದ ನಂದನ್ ಮಲ್ಯ, ಪೃಥ್ವಿರಾಜ್, ಸಂಜಯ್ ಪ್ರಭು,ಬಿಜೆಪಿ ತಾಲೂಕು ಅಧ್ಯಕ್ಷ ಶ್ರೀನಿವಾಸ ರಾವ್, ಜಯಂತ್ ಕೋಟ್ಯಾನ್, ಜಯಾನಂದ ಗೌಡ, ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಉಮೇಶ್ ಕುಲಾಲ್, ಗಣೇಶ್ ಗೌಡ, ಸೀತಾರಮ ಬೆಳಾಲ್, ಶರತ್, ವಿನೀತ್ ಸಾವ್ಯ, ಜಯಪ್ರಕಾಶ್ ಕಡಮ್ಮಾಜೆ, ಹಾಗೂ ಇತರರು ಇದ್ದರು.
