ಬೆಳ್ತಂಗಡಿ: 14ರ ಮತ್ತು 17ರ ವಯೋಮಾನದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಚಿನ್ನದ ಪದಕ ಪಡೆದ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಸಹೋದರಿಯರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಂದಾರಿನ ಮೊಗ್ರು ಗ್ರಾಮದ ದಂಡುಗ ನಿವಾಸಿ ಶೀಲಾವತಿ ಹಾಗೂ ಜನಾರ್ದನ ದಂಪತಿಯ ಪುತ್ರಿಯರಾದ ರಕ್ಷಿತಾ ಜೆ., ಹಾಗೂ ಯಕ್ಷಿತಾ ಜೆ., ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರು.
ರಕ್ಷಿತಾ ಜೆ., ಬಂದಾರು ಸ.ಹಿ.ಪ್ರಾ ಶಾಲೆಯ ವಿದ್ಯಾರ್ಥಿನಿಯರಾಗಿದ್ದು 14ವರ್ಷ ವಯೋಮಿತಿಯ ವಿಭಾಗದಲ್ಲಿ ಹಾಗೂ ಯಕ್ಷಿತಾ ಜೆ., ಮುಂಡಾಜೆ ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು 17ವಯೋಮಾನದ ವಿಭಾಗದಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ್ದು ಎರಡೂ ತಂಡಗಳು ಚಿನ್ನದಪದಕವನ್ನು ತಮ್ಮದಾಗಿಸಿಕೊಂಡಿತ್ತು
ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಗುಣಪಾಲ್ ಎಂ. ಎಸ್. ಹಾಗೂ ಸಂದೀಪ್ ಶೆಟ್ಟಿ ತರಬೇತಿ ನೀಡುತ್ತಿದ್ದಾರೆ.
ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದ 14 ಮತ್ತು 17ರ ವಯೋಮಾನದ ವಾಲಿಬಾಲ್ ಪಂದ್ಯಾಟದ ವಿಭಾಗದಲ್ಲಿ ಇವರಿಬ್ಬರು ಭಾಗವಹಿಸಿ ಚಿನ್ನದ ಪದಕ ಪಡೆದು ಆಂಧ್ರಪ್ರದೇಶದ ಕಡಪಾದಲ್ಲಿ ನ.7ರಿಂದ 12ರ ತನಕ ನಡೆಯುವ ರಾಷ್ಟ್ರಮಟ್ಟದ 70ನೇ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸುವ ಅರ್ಹತೆ ಗಳಿಸಿದ್ದಾರೆ.
