ಬೆಳ್ತಂಗಡಿ; ಲಾಯಿಲ ಗ್ರಾಮದ ಗುಮ್ಮಡ್ಕು ಎಂಬಲ್ಲಿ ಬಾರಿ ಗಾಳಿ ಮಳೆಗೆ ಮರವೊಂದು ವಿದ್ಯುತ್ ತಂತಿ (ಹೆಚ್ ಟಿ) ಮತ್ತು ರಸ್ತೆ ಮೇಲೆ ಬಿದ್ದು ಸಂಪರ್ಕ ಕಡಿತಗೊಂಡಿದೆ. ಲಾಯಿಲ – ನಿನ್ನಿಕಲ್ಲು ಮೂಲಕ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಂಪರ್ಕಿಸುವ ರಸ್ತೆಯ ಗುಮ್ಮಡ್ಕು ಎಂಬಲ್ಲಿ ಗಾಳಿ ಮಳೆಗೆ ಮರ ಬಿದ್ದಿದೆ. ಸಂಜೆ ಸಮಯವಾದ ಕಾರಣ ಉದ್ಯೋಗಸ್ಥರು ಸೇರಿದಂತೆ ಇತರರು ಮನೆ ತಲುಪಲು ಹರಸಾಹಸ ಪಡುವಂತಾಯಿತು.
ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ರಾತ್ರಿಯ ವೇಳೆಗೆ ಮರವನ್ನು ತೆರವು ಗೊಳಿಸಿ ಸಂಚಾರಕ್ಕೆ ಅನುವುಮಾಡಿಕೊಟ್ಟಿದ್ದಾರೆ.
