Home ಅಪರಾಧ ಲೋಕ ಬೆಳ್ತಂಗಡಿ: ಮೇಲಂತಬೆಟ್ಟಿನಲ್ಲಿ ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ ಮೂವರ ಬಂಧನ ಕೋಳಿಗಳು ವಶಕ್ಕೆ

ಬೆಳ್ತಂಗಡಿ: ಮೇಲಂತಬೆಟ್ಟಿನಲ್ಲಿ ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ ಮೂವರ ಬಂಧನ ಕೋಳಿಗಳು ವಶಕ್ಕೆ

0


ಬೆಳ್ತಂಗಡಿ; ಮೇಲಂತಬೆಟ್ಟುವಿನಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿಅಂಕಕ್ಕೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದು ಮೂವರನ್ನು ಬಂಧಿಸಿ ಕೋಳಿಗಳು ಹಾಗೂ ಹಣ ವಶಪಡಿಸಿ ಕೊಂಡಿದ್ದು ಪ್ರಕರಣ‌ ದಾಖಲಿಸಿದ್ದಾರೆ .
ಮೇಲಂತಬೆಟ್ಟು ಗ್ರಾಮದ‌ ಬರಮೇಲು ಎಂಬಲ್ಲಿ ಅಕ್ರಮ ಕೋಳಿಅಂಕ ಹಾಗೂ ಜುಗಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ಬೆಳ್ತಂಗಡಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಕುಲಜ್ಯೀತಿ ತಿಲಕ್ ಹಾಗೂ ತಂಡ ಅ.17 ರಂದು ದಾಳಿ ನಡೆಸಿದ್ದು ಈ ವೇಳೆ ಅಲ್ಲಿದ್ದವರು ಓಡಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದರು. ಆದರೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂದಿತ ಆರೋಪಿಗಳು ಶೇಖರ ಹೆಗ್ಡೆ, ಪುನೀತ್, ಜಗದೀಶ್ ಎಂಬವರಾಗಿದ್ದಾರೆ. ಓಡಿತಪ್ಪಿಸಿಕೊಂಡವರು ಉದಯ್, ಜಾನಾರ್ಧನ ಗೌಡ ಎಂಬವರಾಗಿದ್ದಾರೆ.
ಸ್ಥಳದಿಂದ ಐದು ಕೋಳಿಗಳನ್ನು ವಶಪಡಿಸಿಕೊಂಡಿದ್ದು 500ರೂ ನಗದನ್ನು ಹಾಗೂ ದ್ವಿಚಕ್ರ ವಾಹನವೊಂದನ್ನು ವಶಪಡಿಸಿಕೊಂಡಿದ್ದಾರೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

NO COMMENTS

LEAVE A REPLY

Please enter your comment!
Please enter your name here

Exit mobile version