Home ಕ್ರೀಡಾ ಸಮಾಚಾರ ಬೆಳ್ತಂಗಡಿ; ಶಿಶಿರ್ ಜೆ ಸಾಲ್ಯಾನ್ ರಾಜ್ಯ ಮಟ್ಟದ ವಾಲಿಬಾಲ್ ನಲ್ಲಿ ಅತ್ಯತ್ತಮ “ಸರ್ವಾಂಗೀಣ ಆಟಗಾರ “ಪ್ರಶಸ್ತಿ...

ಬೆಳ್ತಂಗಡಿ; ಶಿಶಿರ್ ಜೆ ಸಾಲ್ಯಾನ್ ರಾಜ್ಯ ಮಟ್ಟದ ವಾಲಿಬಾಲ್ ನಲ್ಲಿ ಅತ್ಯತ್ತಮ “ಸರ್ವಾಂಗೀಣ ಆಟಗಾರ “ಪ್ರಶಸ್ತಿ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ

10
0


ಬೆಳ್ತಂಗಡಿ: ಚಿಕ್ಕಮಗಳೂರಿನ ತರಿಕೆರೆಯಲ್ಲಿ ನಡೆದ ರಾಜ್ಯಮಟ್ಟದ ಹದಿನಾಲ್ಕು ವರ್ಷದ ಒಳಗಿನ ಬಾಲಕರ ವಾಲಿಬಾಲ್ ಪಂದ್ಯಾ ಕೂಟದಲ್ಲಿ ಮೈಸೂರು ವಿಭಾಗೀಯ ತಂಡವನ್ನು ಪ್ರತಿನಿಧಿಸಿದ್ದ  ಶಿಶಿರ್ ಜೆ ಸಾಲಿಯಾನ್  ಹಾಗೂ ತಂಡ ಪ್ರಥಮ ಸ್ಥಾನವನ್ನು ಪಡೆದು ಕೊಂಡಿರುತ್ತದೆ ಹಾಗೂ ವಯಕ್ತಿಕವಾಗಿ ಕೂಟದ ಸರ್ವಾಂಗೀಣ ಆಟಗಾರ ಪ್ರಶಸ್ತಿಯನ್ನು ಶಿಶರ್  ಪಡೆದುಕೊಂಡಿದ್ದು ಆಂಧ್ರಪ್ರದೇಶದ ಕಡಪಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾ ಕೂಟಕ್ಕೆ ಆಯ್ಕೆಯಾಗಿದ್ದಾನೆ.
ಈತ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲಾಪು ಜಯವಿಕ್ರಮ ಹಾಗೂ ಸುಶ್ಮಿತಾ ದಂಪತಿಯ ಪುತ್ರನಾಗಿದ್ದು
ಇಂದ್ರಪ್ರಸ್ಥ ವಿದ್ಯಾಲಯದ ದೈಹಿಕ ಶಿಕ್ಷಕರಾದ ಗೋಪಿನಾಥ್, ಶ್ರೀರಂಜಿನಿ,ವಿದ್ಯಾಶ್ರೀ ಹಾಗೂ ತರಬೇತುದಾರ ರಫೀಕ್ ಮತ್ತು ಪುತ್ತೂರಿನ ಬೆಥನಿ ವಿದ್ಯಾಲಯದ ಅಕ್ಷಯ್ ಹಾಗೂ ನಿರಂಜನ್ ರಿಂದ ತರಬೇತಿಯನ್ನು ಪಡೆದಿರುತ್ತಾನೆ.

LEAVE A REPLY

Please enter your comment!
Please enter your name here