ಬೆಳ್ತಂಗಡಿ; ನಗರದಲ್ಲಿ ಸಿಡಿಲು ಗುಡುಗು ಸಹಿತ ಭಾರೀ ಮಳೆ ಸುರಿದಿದ್ದು ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನಕ್ಕೆ ಸಿಡಿಲು ಬಡಿದು ಹಾನಿ ಸಂಭವಿಸಿದ ಘಟನೆ ಅ18ರಂದು ನಡೆದಿದೆ.
ಸಿಡಿಲಿನಿಂದಾಗಿ ವಕೀಲರ ಭವನದ ಗೋಡೆಗಳಿಗೆ ಹಾನಿಯಾಗಿದ್ದು, ಸಿಡಿಲು ಬಡಿಯುತ್ತಿದ್ದಂತೆ ಕಚೇರಿಯೊಳಗಿದ್ದ ಸಿಬ್ಬಂದಿ ಆತಂಕಗೊಂಡಿದ್ದಾರೆ. ಆದರೆ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಇನ್ನು ಕಚೇರಿಯೊಳಿಗಿದ್ದ ಇಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದ್ಯಾ ಎಂಬ ಬಗ್ಗೆ ಪರಿಶೀಲಿಸಬೇಕಾಗಿದೆ.
