Home ಸಾಧಕರೊಂದಿಗೆ ಕಲಾವಿದ ವಿ.ಕೆ ವಿಟ್ಲ ಅವರಿಗೆ ಕಲಾನಿಧಿ ಪ್ರಶಸ್ತಿ

ಕಲಾವಿದ ವಿ.ಕೆ ವಿಟ್ಲ ಅವರಿಗೆ ಕಲಾನಿಧಿ ಪ್ರಶಸ್ತಿ

2
0

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮಿತಿಯಿಂದ ನೀಡುವ 2024ನೇ ಸಾಲಿನ ಕಲಾನಿಧಿ ಪ್ರಶಸ್ತಿಗೆ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ವಿ.ಕೆ. ವಿಟ್ಲ ಆಯ್ಕೆ ಯಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭ ಅ.18ರಂದು ಮಂಚಿ ಕೊಳ್ಳಾಡು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಮೂಲತ ವಿಟ್ಲದವರಾಗಿರುವ ವಿಶ್ವನಾಥ ಕೆ ವಿಟ್ಲ ರವರು ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ಚಿತ್ರ ಕಲಾ ಶಿಕ್ಷಕರಾಗಿದ್ದು ಪ್ರಸ್ತುತ ಉಜಿರೆಯಲ್ಲಿ ವಾಸವಾಗಿದ್ದಾರೆ. ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ವಿ.ಕೆ ವಿಟ್ಲ ಅವರು ತಾನು ಸೇವೆ ಸಲ್ಲಿಸುತ್ತಿರುವ ಗುರುವಾಯನಕೆರೆ ಪ್ರೌಢಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸುವ ಕಾರ್ಯದಲ್ಲಿ ಸದಾ ನಿರತರಾಗಿದ್ದಾರೆ.

LEAVE A REPLY

Please enter your comment!
Please enter your name here