Home ರಾಜಕೀಯ ಸಮಾಚಾರ ಬೆಳ್ತಂಗಡಿ: ಸ್ಥಗಿತಗೊಂಡ ಬಸ್ ನಿಲ್ದಾಣದ ಕಾಮಗಾರಿ;  ಶಾಸಹ ಹರೀಶ್ ಪೂಂಜ ಅವರಿಂದ‌ ಅಧಿಕಾರಿಗಳೊಂದಿಗೆ ಸಭೆ, ಕಾಮಗಾರಿ...

ಬೆಳ್ತಂಗಡಿ: ಸ್ಥಗಿತಗೊಂಡ ಬಸ್ ನಿಲ್ದಾಣದ ಕಾಮಗಾರಿ;  ಶಾಸಹ ಹರೀಶ್ ಪೂಂಜ ಅವರಿಂದ‌ ಅಧಿಕಾರಿಗಳೊಂದಿಗೆ ಸಭೆ, ಕಾಮಗಾರಿ ಆರಂಭಿಸಲು ಸೂಚನೆ

1
0

ಬೆಳ್ತಂಗಡಿ; ತಾಲೂಕು ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣದ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ಕೊನೆಗೂ ಶಾಸಕ ಹರೀಶ್ ಪೂಂಜ‌ ಅವರು ಅಧಿಕಾರಿಗಳ‌ ಸಬೆ ನಡೆಸಿ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದ್ದಾರೆ.
ಕಾಮಗಾರಿ ಸ್ಥಗಿತಗೊಂಡು ಬಸ್ ನಿಲ್ದಾಣ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಬಗ್ಗೆ “ಬೆಳ್ತಂಗಡಿ ಸಮಾಚಾರ” ಸಮಗ್ರವಾದ ವರದಿಯನ್ನು ಪ್ರಸಾರ ಮಾಡಿತ್ತು.
ಇದೀಗ ಶಾಸಕರು ಈ ಬಗ್ಗೆ ಕೊನೆಗೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಅರಣ್ಯ ಇಲಾಖೆ ಸೇರಿದಂತೆ‌ ಇತರ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ
ಕಾಮಗಾರಿಯನ್ನು ಮುಕ್ತಾಯಗೊಳಿಸುವ ಸಂಬಂಧ ಇರುವ ಅಡಚಣೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದುಕೊಂಡರು. ಸಮಸ್ಯೆಗಳನ್ನು ಪರಿಹರಿಸಿ ಕೂಡಲೇ ಕಾಮಗಾರಿ ಆರಂಭಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ. ಕಳೆದ ಆರು ತಿಂಗಳಿನಿಂದ ಸ್ಥಗಿತಗೊಂಡಿರುವ ಬಸ್ ನಿಲ್ದಾಣದ ಕಾ‌ಮಗಾರಿ ಇನ್ನಾದರೂ ಆರಂಭವಾಗುವುದೇ ಎಂದು ಕಾದು ನೋಡಬೇಕಾಗಿದೆ‌.

LEAVE A REPLY

Please enter your comment!
Please enter your name here