
ಬೆಳ್ತಂಗಡಿ; ಮುಂಡಾಜೆ ವಿವೇಕಾನಂದ ವಿದ್ಯಾಸಂಸ್ಥೆ ಆತಿಥ್ಯದಲ್ಲಿ ಅಕ್ಟೋಬರ್ ಹತ್ತು ಹಾಗೂ ಹನ್ನೊಂದರಂದು ನಡೆದ ಎಂಟು ಜಿಲ್ಲೆಯನ್ನು ಒಳಗೊಂಡ ಮೈಸೂರು ವಲಯ ಹದಿನಾಲ್ಕು ವರ್ಷ ಕೆಳಗಿನ ವಯೋಮಾನದ ವಾಲಿಬಾಲ್ ಪಂದ್ಯಾ ಕೂಟದಲ್ಲಿ ಇಂದ್ರ ಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿಯ ವಿದ್ಯಾರ್ಥಿ ಶಿಶಿರ್ ಜಯವಿಕ್ರಮ್
ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಿ ಮೈಸೂರು ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು
ವಯಕ್ತಿಕವಾಗಿ “ಉತ್ತಮ ಸರ್ವಾಂಗೀಣ ಆಟಗಾರ”ಪ್ರಶಸ್ತಿಯನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾನೆ
ಈತ ಬೆಳ್ತಂಗಡಿ ತಾಲೂಕು ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಹಾಗೂ ಸುಶ್ಮಿತಾ ದಂಪತಿಯ ಪುತ್ರನಾಗಿದ್ದು ಆತನಿಗೆ ಇಂದ್ರಪ್ರಸ್ಥ ವಿದ್ಯಾಲಯದ ದೈಹಿಕ ಶಿಕ್ಷಕರಾದ ಗೋಪಿನಾಥ್ , ತರಬೇತುದಾರ ರಫೀಕ್
ಹಾಗೂ ಬೆಥನಿ ವಿದ್ಯಾ ಸಂಸ್ಥೆಯ ಅಕ್ಷಯ್ ಮತ್ತು ನಿರಂಜನ್ ರಿಂದ ತರಬೇತಿಯನ್ನು ಪಡೆದಿರುತ್ತಾನೆ.