



ಬೆಳ್ತಂಗಡಿ; ಎಸ್.ಎ.ಎಂ ಮುರ ರೀಜಿನಲ್ & ಎಸ್.ಜೆ.ಎಂ ಮುರ ರೇಂಜ್ ವತಿಯಿಂದ
ಎಂ.ಜೆ.ಎಂ ಕಿಲ್ಲೂರು, ಕೆ.ಎಂ.ಸಿ ಆಸ್ಪತ್ರೆ ಅತ್ತಾವರ & ಕೆಎಂ.ಸಿ ಆಸ್ಪತ್ರೆ ಜ್ಯೋತಿ ವೃತ್ತ, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಯನ್ಸ್, ಮಂಗಳೂರು ಮತ್ತು ಬ್ಲಡ್ ಸೆಂಟರ್, ಕೆ.ಎಂ
ಸಿ ಮಂಗಳೂರು ಹಾಗೂ ಬೆನಕ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ, ಉಜಿರೆ ಇವರ ಜಂಟಿ ಸಹ ಯೋಗದೊಂದಿಗೆ
ಬೃಹತ್ ಉಚಿತ ಆರೋಗ್ಯ ತಪಾಸಣೆ, ದಂತ ಚಿಕಿತ್ಸೆ ಮತ್ತು ರಕ್ತದಾನ ಶಿಬಿರ ಅಕ್ಟೋಬರ್ 12 ಭಾನುವಾರದಂದು ಕಿಲ್ಲೂರು ಮುಹಿಯುದ್ದೀನ್ ಜುಮಾ ಮಸ್ಟಿದ್ ವಠಾರದಲ್ಲಿ ನಡೆಯಲಿದೆ ಎಂದು ಕಿಲ್ಲೂರು ಮಸೀದಿ ಅಧ್ಯಕ್ಷ ಅಬ್ದುಲ್ ಅಜೀಜ್ ಝಹರಿ ಅವರು ತಿಳಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಶಿಬಿರದಲ್ಲಿ ಎಲ್ಲರಿಗೂ ಮುಕ್ತವಾದ ಅವಕಾಶವಿದ್ದು ಬೆಳಗ್ಗೆ 9ರಿಂದ ಮಧ್ಯಾಹ್ನದ ವರೆಗೆ ಶಿಬಿರ ನಡೆಯಲಿದೆ.
ಆರೋಗ್ಯ ತಪಾಸಣಾ ಶಿಬಿರದಲ್ಲಿ
ಹೃದಯ ರೋಗ ವಿಭಾಗ
ಬೆನ್ನು & ಸೊಂಟ ಮೂಳೆ ವಿಭಾಗ
ಸ್ತ್ರೀ ರೋಗ ವಿಭಾಗ
ಚರ್ಮ ರೋಗ ವಿಭಾಗ
ಸಾಮಾನ್ಯ ರೋಗ ವಿಭಾಗ
ದಂತ ಚಿಕಿತ್ಸಾ ವಿಭಾಗ
ಕಿವಿ, ಮೂಗು ಮತ್ತು ಗಂಟಲು ವಿಭಾಗ
ಕಣ್ಣಿನ ವಿಭಾಗ
ಎಲುಬು ಮತ್ತು ಕೀಲು ರೋಗ ವಿಭಾಗ ಗಳು ಇರಲಿದ್ದು ತಜ್ಞ ವೈದ್ಯರು ಆಗಮಿಸಲಿದ್ದಾರೆ.
ಶಿಬಿರದಲ್ಲಿ ಲಭ್ಯವಿರುವ ಸೌಲಭ್ಯಗಳು:
ಉಚಿತ ಬಿ.ಪಿ. ಹಾಗೂ ಮಧುಮೇಹ (ಶುಗರ್) ತಪಾಸಣೆ
ಉಚಿತ ಔಷಧ ವಿತರಣೆ (ಲಭ್ಯವಿರುವ ಔಷಧಗಳು ಮಾತ್ರ
ಓದುವ ಕನ್ನಡಕ ಸಂಪೂರ್ಣ ಉಚಿತ.
ಹುಳುಕು ಹಲ್ಲುಗಳಿಗೆ ಸಿಮೆಂಟ್ ತುಂಬಿಸುವುದು, ಹಲ್ಲುಗಳನ್ನು ಸ್ವಚ್ಚಗೊಳಿಸುವುದು, ಹುಳುಕು ಹಲ್ಲುಗಳನ್ನು ಕೀಳುವುದು ಇತ್ಯಾದಿ.
ವೈದ್ಯರು ಸೂಚಿಸಿದವರಿಗೆ ಉಚಿತ ಇಸಿಜಿ ವ್ಯವಸ್ಥೆ, ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಶಿಬಿರದಲ್ಲಿ ತಪಾಸಣೆ ಮತ್ತು ಲಭ್ಯ ಔಷಧಿಗಳು ಉಚಿತವಾಗಿರಲಿದೆ.
ಶಿಬಿರಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಕೆ.ಎಂ.ಸಿ. ಆಸ್ಪತ್ರೆಯ ಹಸಿರು ಕಾರ್ಡು ನೀಡಲಾಗುವುದು. ಈ ಹಸಿರು ಕಾರ್ಡ್ ಮೂಲಕ ಒಳರೋಗಿಯಾಗಿ ದಾಖಲಾದಲ್ಲಿ ಶಸ್ತ್ರಚಿಕಿತ್ಸೆಗೆ ಗರಿಷ್ಠ ರೂ. 10,000/- ಮತ್ತು ಇತರ ಚಿಕಿತ್ಸೆಗೆ ಗರಿಷ್ಠ ರೂ. 5,000/- ವವರೆಗೆ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಆರೋಗ್ಯ ತಪಾಸಣಾ ಶಿಬಿರಕ್ಕೆ ಎಲ್ಲ ಸಿದ್ದತೆಗಳನ್ನು ಮಾಡಲಾಗಿದೆ 150 ಕ್ಕು ಹೆಚ್ಚು ಮಂದಿ ರಕ್ತದಾನ ಮಾಡುವ ನಿರೀಕ್ಷೆಯಿದೆ ಉದ್ಘಾಟನಾ ಕಾರ್ಯಕ್ರಮ್ಕೆ ಎಲ್ಲ ಧರ್ಮದ ಮುಖಂಡರುಗಳು ಸಾಮಾಜಿಕ ಮುಖಂಡರುಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದ ಅವರು ಈ ಪರಿಸರದ ಹೆಚ್ಚಿನ ಜನರು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಜೆ ಎಂ ಮುರ ವಲಯ ಅಧ್ಯಕ್ಷರಾದ ಸಿರಾಜುದ್ದೀನ್ ಸಖಾಫಿ, ಎಸ್.ಎ
ಎಂ ಮುರ ಅಧ್ಯಕ್ಷ ಅಬ್ದುಲ್ ಸಮದ್, ಎಸ್.ಎ.ಎಂ ಮುರ ಉಪಾಧ್ಯಕ್ಷ ಸತ್ತಾರ್ ಸಖಾಫಿ, ಕೋಶಾಧಿಕಾರಿ ಅನ್ಸಾರ್ ಲಾಯಿಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ಪೂರಕ ಮಾಹಿತಿಗಳನ್ನು ನೀಡಿದರು.
