


ಬೆಳ್ತಂಗಡಿ; ಸುಲ್ಕೇರಿ ಮೊಗ್ರು ಗ್ರಾಮಪಂಚಾಯತಿನ ನಾವರ ಗ್ರಾಮದ ದೇವರ ಗುಡ್ಡೆ ಎಸ್.ಸಿ ಕಾಲೊನಿಯಲ್ಲಿ ರಸ್ತೆ ಬದಿಯಲ್ಲಿ ತೆರೆದ ಬಾವಿಯೊಂದು ಬಲಿಗಾಗಿ ಬಾಯಿತೆರದು ಕಾಯುತ್ತಿದೆ.
ರಸ್ತೆಯ ಬದಿಯಲ್ಲಿಯೇ ಇರುವ ಈ ಬಾವಿಗೆ ಯಾವುದೇ ಆವರಣಗೋಡೆ ತಡೆಬೇಲಿಯಿಲ್ಲ. ವಾಹನ ಸವಾರರು ಒಂದಿಷ್ಟು ಎಚ್ಚರ ತಪ್ಪಿದರೂ ಆಪಾಯವಿದೆ. ಕಿರಿದಾದ
ರಸ್ತೆಯಿಂದ ಕೇವಲ ನಾಲ್ಕು ಫೀಟ್ ಅಂತರದಲ್ಲಿ ಈ ಬಾವಿಯಿದೆ. ಪ್ರತಿ ನಿತ್ಯ ಸಾರ್ವಜನಿಕರು ಓಡಾಡು ರಸ್ತೆ ಇದಾಗಿದ್ದು ಶಲಾಮಕ್ಕಳೂ ಇದೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತಾರೆ. ನೀರು ಹಾಗೂ ತ್ಯಾಜ್ಯ ತುಂಬಿರುವ ಈ ಬಾವಿ ಅಪಾಯಕಾರಿಯಾಗಿ ಬಾಗಿ ತೆರೆದು ರಸ್ತೆಬದಿಯಲ್ಲಿಯೇ ನಿಂತಿದೆ.
ಈ ಬಾವಿಗೆ ಆವರಣ ಗೋಡೆ ರಚಿಸುವಂತೆ ಅಥವಾ ಕನಿಷ್ಟ ತಡೆಬೇಲಿಯಾದರೂ ಕಟ್ಟು ವಂತೆ ಗ್ರಾಮೊಂಚಾಯತಿನಗಮನ ಸೆಳೆಯುವ ಕಾರ್ಯ ಹಲವು ಬಾರಿ ಮಾಡಲಾಗಿದೆ ಆದರೆ ಈವರೆಗೂ ಪಂಚಾಯತು ಆಡಳಿತ ಇತ್ತ ಗಮನ ಹರಿಸಿಲ್ಲ ಆಡಳಿತ ವ್ಯವಸ್ಥೆ ಎಚ್ಚೆತ್ತು ಕೊಳ್ಳಬೇಕಾದರೆ ಇಲ್ಲಿ ಯಾವುದಾದರೂ ಅನಾಹುತವೇ ಸಂಭವಿಸಬೇಕೇ ಎಂದು ಪ್ರಶ್ನಿಸುತ್ತಿದ್ದಾರೆ ಇಲ್ಲಿನ ಜನರು.
