Home ಅಪರಾಧ ಲೋಕ ಸಮೀಕ್ಷೆ ಹಿನ್ನಲೆ ಸರಕಾರಿ ಶಾಲೆಗಳಿಗೆ ಅ 18ರ ವರೆಗೆ ರಜೆ ಘೋಷಣೆ ಮುಖ್ಯಮಂತ್ರಿ ಆದೇಶ

ಸಮೀಕ್ಷೆ ಹಿನ್ನಲೆ ಸರಕಾರಿ ಶಾಲೆಗಳಿಗೆ ಅ 18ರ ವರೆಗೆ ರಜೆ ಘೋಷಣೆ ಮುಖ್ಯಮಂತ್ರಿ ಆದೇಶ

26
0

ಬೆಳ್ತಂಗಡಿ: ರಾಜ್ಯದಲ್ಲಿ ಈಗಾಗಲೇ ನಡೆಯುತ್ತಿರುವ ಸಾಮಾಜಿಕ,
ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗಳು ನಡೆಯುತ್ತಿದ್ದು ನಿಗದಿತ ಸಮಯಕ್ಕೆ ಸಮೀಕ್ಷೆ ಮುಗಿಯದ ಹಿನ್ನೆಲೆಯಲ್ಲಿ ಅ.8ರಿಂದ ಅ.18ರವರೆಗೆ ರಾಜ್ಯದ ಎಲ್ಲಾ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ರಜೆಯನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಅ.7ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶಿಕ್ಷಣ ಸಚಿವರು ನಡೆಸಿದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಅ.18ನೇ ತಾರೀಕಿನ ಒಳಗೆ ಬಾಕಿ ಇರುವ ಎಲ್ಲಾ ಸಮೀಕ್ಷೆ ಕಾರ್ಯಗಳನ್ನು ಮುಗಿಸಲು ಸೂಚನೆ ನೀಡಲಾಗಿದೆ.

LEAVE A REPLY

Please enter your comment!
Please enter your name here