
ಬೆಳ್ತಂಗಡಿ; ಲಾಯಿಲ ಗ್ರಾಮಪಂಚಾಯತು ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡ ಖತ್ತಾರ್ ಮುಹಮ್ಮದ್ ಕುಂಞ್ಞಿ ಹಾಜಿ (67) ಹೃದಯಾಘಾತದಿಂದ ಅ.3ರಂದು ನಿಧನರಾಗಿದ್ದಾರೆ.
ಮಧ್ಯಾಹ್ನದ ವೇಳೆ ಕುಂಟಿನಿ ಮಸೀದಿಯಲ್ಲಿ ಪ್ರಾರ್ಥನೆ ಗೆ ತೆರಳಿದ್ದವೇಳೆ ಇವರಿಗೆ ಹೃದಯಾಘಾತವಾಗಿದ್ದು ಕುಸಿದು ಬಿದ್ದಿದ್ದು ಮೃತಪಟ್ಟಿದ್ದಾರೆ.
ಲಾಯಿಲ ಗ್ರಾಮದ ಕುಂಟಿನಿ ನಿವಾಸಿಯಾಗಿರುವ ಮುಹಮ್ಮದ್ ಕುಂಞ್ಞಿ ಅವರು ಕತ್ತಾರ್ ನಲ್ಲಿ ಸರಕಾರಿ ಉದ್ಯೋಗಿಯಾಗಿದ್ದರು 30ವರ್ಷಗಳ ಕಾಲ ಕತಾರ್ ಫುಟ್ಬಾಲ್ ಅಸೋಸಿಯೇಷನ್ ನಲ್ಲಿ ಆರ್ಥಿಕ ವಿಭಾಗದಲ್ಲಿ ಕೆಲಸ ಮಾಡಿದ್ದ ಇವರು ಬೆಳ್ತಂಗಡಿ ತಾಲೂಕಿನಲ್ಲಿ ಹಲವಾರು ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆಯಾಗಿ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಕುಂಟಿನಿ ಮಸೀದಿಯ ಅಧ್ಯಕ್ಷರಾಗಿ ಮೂರು ವರ್ಷ ಸೇವೆ ಸಲ್ಲಿಸಿದ ಇವರು ಕಾಂಗ್ರೆಸ್ ಪಕ್ಷದ ಬೆಳ್ತಂಗಡಿ ನಗರ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರೂ ಆಗಿದ್ದರು.
ಮೃತರು ಪತ್ನಿ ಹಾಗೂ ಏಳು ಮಂದಿ ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ