Home ರಾಜಕೀಯ ಸಮಾಚಾರ ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಪಕ್ಷದ ಕಚೇರಿಯಲ್ಲಿ  ಜನ ಸಂಘದ ಸಂಸ್ಥಾಪಕರಾದ ಪಂಡಿತ್ ದೀನ್ ದಯಾಳ್...

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಪಕ್ಷದ ಕಚೇರಿಯಲ್ಲಿ  ಜನ ಸಂಘದ ಸಂಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ

0

ಬೆಳ್ತಂಗಡಿ :ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಅಪ್ರತಿಮ ಸಂಘಟಕ, ಏಕಾತ್ಮ ಮಾನವತೆಯ ಪ್ರತಿಪಾದಕರು, ಅಗ್ರಪಂಕ್ತಿಯ ಲೇಖಕರು, ರಾಷ್ಟ್ರವಾದಿ, ದಾರ್ಶನಿಕರು, ಮಾರ್ಗದರ್ಶಕರು ಜನ ಸಂಘದ ಸಂಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆಯನ್ನು ಸೆ 25 ರಂದು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ದೀನ್ ದಯಾಳ್ ಉಪಾಧ್ಯಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಸಿಹಿ ಹಂಚಲಾಯಿತು. ಬೆಳ್ತಂಗಡಿ ಬಿಜೆಪಿ ಮಂಡಲಾಧ್ಯಕ್ಷರಾದ ಶ್ರೀನಿವಾಸ್ ರಾವ್ ಧರ್ಮಸ್ಥಳ ಇವರು ದೀನ್ ದಯಾಳ್ ಉಪಾಧ್ಯಾಯರ ವ್ಯಕ್ತಿತ್ವ, ಸಾಧನೆಗಳ ಬಗ್ಗೆ ಸಂದರ್ಭೋಚಿತವಾಗಿ ಮಾತಾಡಿದರು. ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ಪ್ರಜ್ವಲ್, ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲು, ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಗಣೇಶ್ ಗೌಡ ನಾವೂರು, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೇವಾ ಪಾಕ್ಷಿಕದ ಸಂಚಾಲಕರಾದ ಶ್ರೀಮತಿ ಪೂರ್ಣಿಮಾ ಜಯಂತ್, ಮಂಡಲ ಕಾರ್ಯದರ್ಶಿಗಳಾದ ಸುಂದರ್ ಹೆಗ್ಡೆ, ಶ್ರೀಮತಿ ಆಶಾ ಲಾಯಿಲ, ಪ್ರಭಾಕರ ಆಚಾರ್,ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ರಾಜೇಶ್ ಪ್ರಭು, ಲಾಯಿಲ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಾಯಿಲ ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಶ್ರೀಮತಿ ಪೂರ್ಣಿಮಾ ಜಯಂತ್ ಸ್ವಾಗತಿಸಿ, ಜಯಾನಂದ ಗೌಡ ಪ್ರಜ್ವಲ್ ಧನ್ಯವಾದವಿತ್ತರು.

NO COMMENTS

LEAVE A REPLY

Please enter your comment!
Please enter your name here

Exit mobile version