Home ಬ್ರೇಕಿಂಗ್‌ ನ್ಯೂಸ್ ಬೆಳ್ತಂಗಡಿ :ಧರ್ಮಸ್ಥಳ ಬುರುಡೆ ಪ್ರಕರಣ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಹೇಳಿಕೆ ದಾಖಲು ಪ್ರಕ್ರಿಯೆಗೆ ಚಾಲನೆ

ಬೆಳ್ತಂಗಡಿ :ಧರ್ಮಸ್ಥಳ ಬುರುಡೆ ಪ್ರಕರಣ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಹೇಳಿಕೆ ದಾಖಲು ಪ್ರಕ್ರಿಯೆಗೆ ಚಾಲನೆ

32
0

ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ್ನು BNSS 183 ಹೇಳಿಕೆ ನೀಡಲು ಬೆಳ್ತಂಗಡಿ ನ್ಯಾಯಾಲಯಕ್ಕೆ ಸೆ.25 ರಂದು 11 ಗಂಟೆಗೆ ಶಿವಮೊಗ್ಗ ಜೈಲಿನಿಂದ ಕರೆದುಕೊಂಡು ಬಂದಿದ್ದು 12 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಈತನ ಹೇಳಿಕೆ ದಾಖಲಿಸುವ ಕಾರ್ಯ ಆಭಿಸಿದ್ದಾರೆ.
ಇಂದು ನ್ಯಾಯಾಲಯದಲ್ಲಿ ಸಂಜೆಯವರೆಗೆ ಚಿನ್ನಯ್ಯನ ಹೇಳಿಕೆಯನ್ನು ನ್ಯಾಯಾಧೀಶರು ದಾಖಲು ಮಾಡಲಿದ್ದಾರೆ.

ಏನಿದು ಹೇಳಿಕೆ ಇದಕ್ಕಿರುವ ಮಹತ್ವವೇನು?
ಸಾಕ್ಷಿ ದೂರುದಾರನಾಗಿ ಬಂದಿದ್ದ ಚಿನ್ನಯ್ಯ ಪ್ರಕರಣದಲ್ಲಿ ಆರೋಪಿಯಾಗಿ ಬದಲಾಗಿದ್ದಾನೆ.
ಆರಂಭದಲ್ಲಿ ತನ್ನ ನ್ಯಾಯವಾದಿಗಳೊಂದಿಗೆ ಬಂದಿದ್ದ ಚಿನ್ನಯ್ಯ ತಾನು ಧರ್ಮಸ್ಥಳ ಗ್ರಾಮದ ವಿವಿದೆಡೆ ನೂರಾರು ಮೃತದೇಹಗಳನ್ನು ಕಾನೂನುಬಾಹಿರವಾಗಿ ಹೂತು ಹಾಕಿದ್ದೇನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರುಗೆ ದೂರು ನೀಡಿದ್ದ. ಅದಾದ ಬಳಿಕ ಆತನ ವಕೀಲರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು.  ಬೆಳ್ತಂಗಡಿ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ತಾನಾಗಿಯೇ‌ ಒಂದು ಬಿ.ಎನ್.ಎಸ್.183 ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಿದ್ದ ಈ ಹೇಳಿಕೆ ಇನ್ನೂ ಬಹಿರಂಗವಾಗಿಲ್ಲ. ಆವೇಳೆ ಆತ ತಲೆ ಬುರುಡೆಯೊಂದನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದ. ಈತನ ಹೇಳಿಕೆಯಂತೆ ಪ್ರಕರಣ‌ದಾಖಲಾಗಿತ್ತು. ಬಳಿಕ ಸರಕಾರ ಎಸ್.ಐ.ಟಿ ರಚಿಸಿ ತನಿಖೆಗೆ ಆದೇಶ ನೀಡಿತ್ತು.
ತನಿಖೆಯ ಆರಂಭದಲ್ಲಿ ತನ್ನ ಹೇಳಿಕೆಗಳಿಗೆ ಬದ್ದನಾಗಿದ್ದ ಚಿನ್ನಯ್ಯ ಅದಾದ ಬಳಿಕ ತನಿಖೆ ಮುಂದುವರಿದಂತೆ ತನ್ನ ಆರಂಭದ ಹೇಳಿಕೆಯಿಂದ ಹಿ‌ದೆ ಸರಿದಿದ್ದಾನೆ. ಬುರುಡೆಯ ವಿಚಾರದಲ್ಲಿ ಅದನ್ನು ತೆಗೆದ ಜಾಗದ ಬಗ್ಗೆ ತನಗೆ ತಿಳಿದಿಲ್ಲ ಎಂಬ ಹೇಳಿಕೆ ನೀಡಿದ್ದಾಗಿ ತಿಳಿದು ಬಂದಿದ್ದು ಈ ಹಿನ್ನಲೆಯಲ್ಲಿ ಈತನನ್ನು ವಿಚಾರಣೆ ನಡೆಸಿದ ಎಸ್.ಐ‌.ಟಿ ಆತನಿಂದ ಹಲವು ಮಾಹಿತಿಗಳನ್ನು ಪಡೆದುಕೊಂಡು ಆತನ ವಿರುದ್ದ ಪ್ರಕರಣ ದಾಖಲಿಸಿ ಚಿನ್ನಯ್ಯನನ್ನು ವಶಕ್ಕೆ ಪಡೆದಿದ್ದರು. ಈ ಸಂದರ್ಭದಲ್ಲಿ ಆತ ನ್ಯಾಯಾಧೀಶರ ಮುಂದೆ ಮತ್ತೊಂದು ಹೇಳಿಕೆಯನ್ನು ದಾಖಲಿಸಿದ್ದ. ಅದು ಏನು ಎಂಬ ವಿಚಾರವೂ ಇನ್ನು ಗುಪ್ತವಾಗಿಯೇ ಇದೆ.  ಆತ ತಂದಿದ್ದ ತಲೆಬುರುಡೆಯ ಬಗ್ಗೆ ನಿರಂತರವಾಗಿ ತನಿಖೆಯನ್ನು ಎಸ್.ಐ‌.ಟಿ ನಡೆಸಿತ್ತು. ಈ ತನಿಖೆಯ ಹಙತದಲ್ಲಿ ಹಲವು ಹೊಸ ವಿಚಾರಗಳು ಬಹಿರಂಗವಾಗಿತ್ತು.  ಮಹೇಶ್ ಶೆಟ್ಟಿ ತಿಮರೋಡಿ ತಂಡದಿಂದ ಹಲವರ ವಿಚಾರಣೆ ನಡೆದಿತ್ತು. ಬಳಿಕ ಚಿನ್ನಯ್ಯನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆ ಸಂದರ್ಭದಲ್ಲಿ ಚಿನ್ನಯ್ಯ ತಾನು ಹಿಂದೆ ನೀಡಿದ್ದ ಹೇಳಿಕೆಗೆ ಒತ್ತಡದಿಂದ ನೀಡಿದ್ದು ತಾನು ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡುವುದಾಗಿ ನ್ಯಾಯಾಲಯದ ಮುಂದೆ ಬಿನ್ನವಿಸಿಕೊಂಡಿದ್ದ ಅದರಂತೆ ಈಗ ಆತನ ಹೇಳಿಕೆ ದಾಖಲಿಸುವ ಕಾರ್ಯ ನಡೆಯುತ್ತಿದೆ.
ಇಂದು ಹೇಳಿಕೆ ನೀಡುವ ಸಂದರ್ಭದಲ್ಲಿ ಚಿನ್ನಯ್ಯ ಯಾವೆಲ್ಲ ಹೊಸ ವಿಚಾರಗಳನ್ನು ಹೇಳುತ್ತಾನೆ ಎಂಬುದು ಮಹತ್ವದ ವಿಚಾರವಾಗಲಿದೆ. ಆರಂಭದಲ್ಲಿ ಚಿನ್ನಯ್ಯನ ಹೇಳಿಕೆಯ ಮೇಲೆಯೇ ಇಡೀ ಪ್ರಕರಣ‌ ರೂಪಗೊಂಡಿತ್ತು  ಇದೀಗ ಆತ ತನ್ನ ಹೇಳಿಕೆಯನ್ನು ಬದಲಿಸುವುದರೊಂದಿಗೆ ಈ ಪ್ರಕರಣವೂ ಬಹುತೇಕ ಕೊನೆಗೊಂಡಂತಾಗಿದೆ. ಆದರೆ ಎಸ್.ಐ.ಟಿ ತನಿಖೆಯ ವೇಳೆ ಈತನ ಹೇಳಿಕೆಯ ವಿಚಾರವಲ್ಲದೆ ಹೊಸದಾಗಿ ಯಾವುದಾದರೂ ವಿಚಾರಗಳು ಕಂಡು ಬಂಸಿದ್ದರೆ ಈ ಬಗ್ಗೆ ತನಿಖೆ ನಡೆಸುವ ಅವಕಾಶ ಎಸ್.ಐ.ಟಿ ಗೆ ಇದೆ. ಅದೇರೀತಿ ಇದೀಗ ಎಸ್.ಐ.ಟಿ ಮುಂದೆ ಈಗಾಗಲೇ ಹಲವಾರು ದೂರುಗಳಿದ್ದು ಈ ದೂರುಗಳ ಬಗ್ಗೆ ಎಸ್.ಐ.ಟಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ. ಈ ಬಗ್ಗೆ ಸರಕಾರ ಯಾವ ನಿಲುವನ್ನು ತೆಗೆದುಕೊಳ್ಳಲಿದೆ ಎಂಬ ವಿಚಾರಗಳು ಇಡೀ ಪ್ರಜರಣದಲ್ಲಿ ಪ್ರಾಮೂಖ್ಯತೆಯನ್ನು ಪಡೆದುಕೊಳ್ಳಲಿದೆ. ಅದೇರೀತಿ ಚಿನ್ನಯ ಇದೀಗ ತನ್ನ ಹೇಳಿಕೆಯಲ್ಲಿ ಇಡೀ ಪ್ರಕರಣದ ಬಗ್ಗೆ ಹೊಸ ವಿಚಾರಗಳನ್ನು ಪ್ರಸ್ತಾಪ ಮಾಡುವ ಸಾಧ್ಯತೆಯಿದ್ದು ಚಿನ್ನಯ್ಯ ಬಂದಿರುವುದರ ಹಿಂದೆ ಯಾರ ತಂತ್ರಗಾರಿಕೆ ಇದೆ ಅದರ ಹಿಂದೆ ಇರುವವರು ಯಾರು ಎಂಬ ಬಗ್ಗೆ ಚಿನ್ನಯ್ಯ ನೀಡುವ ಹೇಳಿಕೆಗಳ ಹಿನ್ನಲೆಯಲ್ಲಿ ಈ ಷಡ್ಯಂತ್ರ ನಡೆದಿದೆಯೇ ಎಂಬ ಬಗ್ಗೆಯೂ ಎಸ್.ಐ‌.ಟಿ ಮತ್ತೊಂದು ತಿಖೆ ನಡೆಸುವ ಸಾಧ್ಯತೆಗಳೂ ಇದೆ ಎನ್ನಲಾಗುತ್ತಿದೆ.

ಚಿಮ್ನಯ್ಯ ಎರಡು ಪ್ರತ್ಯೇಕವಾದ ಹೇಳಿಕೆಗಳನ್ನು ನೀಡಿದ್ದು ಈ ಹೇಳಿಕೆಗಳ ಮೇಲೆ ಕ್ರಮ ಹೊಸ ಪ್ರಕರಣಗಳು ದಾಖಲಿಸಲು ಕ್ರಮ ಕೈಗೊಳ್ಳಲು ಪೂರಕ ಸಾಕ್ಷ್ಯ ಗಳ ಅಗತ್ಯವಿದೆ. ಈನಿಟ್ಟಿನಲ್ಲಿ ಎಸ್.ಐ.ಟಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಮಹತ್ವದ ವಿಚಾರ. ಒಟ್ಟಾರೆಯಾಗಿ ಎಸ್.ಐ.ಟಿ ತನಿಖೆ ಇದೀಗ ಒಂದು ಮಹತ್ವದ ಹಂತ ತಲುಪಿದ್ದು ಮುಂದಿನ ನಡೆಯೇನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ

LEAVE A REPLY

Please enter your comment!
Please enter your name here