Home ಸ್ಥಳೀಯ ಸಮಾಚಾರ ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಹಾಗೂ ಪೆರಿಯಾರ್...

ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಹಾಗೂ ಪೆರಿಯಾರ್ ರಾಮಸ್ವಾಮಿಯವರ ಹುಟ್ಟು ಹಬ್ಬದ ಪ್ರಯುಕ್ತ ಕ್ರಕೆಟ್ ಪಂದ್ಯಾಟ

27
0

ಬೆಳ್ತಂಗಡಿ;  ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಸಮಾಜ ಪರಿವರ್ತನಾ ಚಿಂತಕರುಗಳಾದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಹಾಗೂ ಪೆರಿಯಾರ್ ರಾಮಸ್ವಾಮಿಯವರ ಹುಟ್ಟು ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ  ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವು ಸೆ 21 ರಂದು ಮಾಲಾಡಿಯ ಶ್ರೀ ರಾಮಾಂಜನೆಯ ಭಜನಾ ಮಂದಿರದ ವಠಾರದಲ್ಲಿ ನಡೆಯಿತು. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ತಾಲೂಕು ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಒಂದೇ ಜಾತಿ ಒಂದೇ ಕುಲ ಎಂದು ಸಾರಿದ ನಾರಾಯಣ ಗುರುಗಳ ಜನ್ಮ ಜಯಂತಿಯನ್ನು ಎಲ್ಲಾ ಜಾತಿಯವರನ್ನು ಒಟ್ಟು ಸೇರಿಸಿ ಈ ರೀತಿ ಯುವಕರಿಗೆ ಚಿಂತನೆಯನ್ನು ಮೂಡಿಸುವ ಸತ್ಯ ಶೋಧಕ ತಂಡದ ಯೋಜನೆ ಉತ್ತಮವಾದದು ಎಂದು ಶ್ಲಾಘಿಸಿದರು. ವೇದಿಕೆಯಲ್ಲಿ ಪಾರೆಂಕಿ ಮಹಿಷಮರ್ಧಿನಿ ದೇವಸ್ಥಾನ ಇದರ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಮೇಶ್ ಮಡಂತ್ಯಾರ್, ಮಾಲಾಡಿಯ ಆಶಾ ಕಾರ್ಯಕರ್ತೆ ಸವಿತಾ ಸೀತಾರಾಮ ಪೂಜಾರಿ, ಸತ್ಯ ಸಾರಮುಪ್ಪಣ್ಯ ಪಡ್ತಿರೆ ಗರ್ಡಾಡಿ ಇದರ ಅಧ್ಯಕ್ಷರಾದ ರಂಜಿತ್ ಹೆಚ್, ಸತ್ಯ ಶ್ರೀ ಪ್ರೆಂಡ್ಸ್ ಪಡ್ತಿರೆ ಗರ್ಡಾಡಿ ಇದರ ಅಧ್ಯಕ್ಷರಾದ ಪ್ರಸಾದ್ ಕುರ್ಲೊಟ್ಟು, ರೂಪ ಸೌಂಡ್ಸ್ ಲೈಟಿಂಗ್ಸ್ ಇದರ ಮಾಲಕರಾದ ರೂಪೇಶ್ ಕೊಲ್ಪೆದಬೈಲು, ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಸೋಣಂದೂರು ಇದರ ಎಸ್,ಡಿ,ಎಮ್,ಸಿ ಸದಸ್ಯರಾದ ಮಂಜುನಾಥ ಇವರುಗಳು ಉಪಸ್ಥಿತರಿದ್ದರು. ಸತ್ಯ ಶೋಧಕ ವೇದಿಕೆಯ ಅಧ್ಯಕ್ಷ ಸುಕೇಶ್ ಕೆ ಮಾಲಾಡಿ ಕ್ರೀಡಾಕೂಟದ ಉದ್ದೇಶದ ಬಗ್ಗೆ ಪ್ರಾಸ್ತಾವಿಕ ಮಾತುಗಳೊಂದಿಗೆ ವ್ಯಕ್ತಪಡಿಸುತ್ತಾ ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು. ಸುಶ್ಮೀತಾ ಮಾಲಾಡಿ ನಿರೂಪಿಸಿ, ಸತೀಶ್ ಉಜಿರೆ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here