Home ಸ್ಥಳೀಯ ಸಮಾಚಾರ ಬೆಳ್ತಂಗಡಿ ವಲಯ ಕಥೋಲಿಕ್ ಸಭಾದಿಂದ ಭಾಷಣ ಕೌಶಲ್ಯದ ಬಗ್ಗೆ ತರಬೇತಿ

ಬೆಳ್ತಂಗಡಿ ವಲಯ ಕಥೋಲಿಕ್ ಸಭಾದಿಂದ ಭಾಷಣ ಕೌಶಲ್ಯದ ಬಗ್ಗೆ ತರಬೇತಿ

44
0

ಬೆಳ್ತಂಗಡಿ; ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ) ಬೆಳ್ತಂಗಡಿ ವಲಯದ ಮೇಲ್ ಉಸ್ತುವಾರಿಯಲ್ಲಿ ಮಕ್ಕಳಿಗೆ ಭಾಷಣ ಸ್ಪರ್ಧೆಯ ತರಬೇತಿ ಕಾರ್ಯ ಕ್ರಮ ಬೆಳ್ತಂಗಡಿ ಚರ್ಚಿನ ಹೋಲಿ ರಿಡೀಮರ್ ಆಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು.

ಬೆಳ್ತಂಗಡಿ ಚರ್ಚಿನ ಧರ್ಮ ಗುರುಗಳಾದ ಫಾದರ್ ವಾಲ್ಡರ್ ಡಿ ಮಿಲ್ಲೋ ಅವರು ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಥೊಲಿಕ್ ಸಭಾ ಬೆಳ್ತಂಗಡಿ ವಲಯದ ಅಧ್ಯಕ್ಷರಾದ  ಅಲ್ಬರ್ಟ್ ಸುನಿಲ್ ಮೋನಿಸ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಈ ಭಾಷಣ ತರಬೇತಿಯ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾನಿಲಯದ  ಮ್ಯುರಲ್ ಹೆನ್ರಿಟಾ ಕುಟಿನ್ಹಾ, ಅವರು ಆಗಮಿಸಿದ್ದರು.ಬೆಳ್ತಂಗಡಿ ವಲಯದ ನಿರ್ದೆಶಕರಾದ ಪಾದರ್ ವಾಲ್ಟರ್ ಡಿ ಮೆಲ್ಲೊ ಅವರು ಮಕ್ಕಳಿಗೆ ಸಂದೇಶ ನೀಡಿದರು.

ಕೇಂದ್ರಿಯ ರಾಜಕೀಯ ಸಂಚಾಲಕರಾದ  ಸ್ಟ್ಯಾನಿ ಲೋಬೊ, ಕಥೋಲಿಕ್ ಸಭಾ ಬೆಳ್ತಂಗಡಿ ವಲಯದ ಅಧ್ಯಕ್ಷರಾದ ಆಲ್ಬರ್ಟ್ ಸುನಿಲ್ ಮೋನಿಸ್,ವಲಯ ಕಾರ್ಯದರ್ಶಿ ಸ್ಟೇನಿ ಪಿಂಟೊ, ಬೆಳ್ತಂಗಡಿ ಕಥೋಲಿಕ್ ಸಭಾ ಘಟಕದ ಅಧ್ಯಕ್ಷರಾದ ಗಿಲ್ಬರ್ಟ್ ಪಿಂಟೋ, ವಲಯದ ಭಾಷಣ ಸ್ಪರ್ಧೆಯ
ಸಂಚಾಲಕ ಡೆನಿಯಲ್ ಕ್ರಾಸ್ತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಐರಿನ್ ಸಿಕ್ವೇರಾ ಸಂಪನ್ಮೂಲ ವ್ಯಕ್ತಿಯವರ ಪರಿಚಯವನ್ನು ಮಾಡಿದರು. ವಲಯದ ಭಾಷಣ ಸ್ಪರ್ಧೆಯ ಸಂಚಾಲಕರು ವಂದಿಸಿದರು.  ಬೆಳ್ತಂಗಡಿ ಚರ್ಚಿನ ಉಪಾಧ್ಯಕ್ಷರು  ವಾಲ್ಟರ್ ಮೋನಿಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಭಾಷಣ ತರಬೇತಿಯ ಕಾರ್ಯಕ್ರಮಕ್ಕೆ ಸುಮಾರು 270 ಮಕ್ಕಳು ಭಾಗವಹಿಸಿದ್ದರು. ಇದರಲ್ಲಿ ಮಡಂತ್ಯಾರಿನ ಮಕ್ಕಳು ಅತೀ ಹೆಚ್ಚು ಭಾಗವಹಿಸಿದ್ದರಿಂದ ಮಡಂತ್ಯಾರಿನ ಘಟಕದ ಅಧ್ಯಕ್ಷರಾದ ವಿನ್ಸೆಂಟ್ ಡಿಸೋಜಾ ಹಾಗೂ ಕೇಂದ್ರಿಯ ಕಮಿಟಿಯ ಉಪಾಧ್ಯಕ್ಷರು  ಲಿಯೋ ರೋಡ್ರಿಗಸ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here