


ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ನೇರ್ತನೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ಸೆ 21ಭಾನುವಾರ ದಂದು ಸ್ಥಳೀಯರು ಒಟ್ಟು ಸೇರಿ ಶ್ರಮದಾನದ ಮೂಲಕ ರಸ್ತೆಯ ದುರಸ್ತಿ ಕಾರ್ಯ ನಡೆಸಿದ್ದಾರೆ.
ಕಳೆದ ಮಳೆಗಾಲದಲ್ಲಿ ದೊಡ್ಡ ಗಾತ್ರಗಳ ಹೊಂಡಗಳು ಬಿದ್ದಿದ್ದು ವಾಹನಗಳ ಸಂಚಾರ ಅಸಾಧ್ಯವಾದ ಹಿನ್ನಲೆಯಲ್ಲಿ ಸ್ಥಳೀಯರು ಈ ಬಗ್ಗೆ ವಾರ್ಡ್ ಸಭೆಯಲ್ಲಿ ಗಮನಸೆಳೆದಿದ್ದರು . ಒಂದೇ ವಾರದಲ್ಲಿ ದುರಸ್ತಿ ಮಾಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು ಆದರೆ ಈ ವೆರಗೂ ಯಾವುದೇ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ಮಾಜಿ ಗ್ರಾಮಪಂಚಾಯತು ಸದಸ್ಯ ಟಿ.ವಿ ದೇವಸ್ಯ ಅವರ ನೇತೃತ್ವದಲ್ಲಿ ಸ್ಥಳೀಯರು ಶ್ರಮದಾನ ನಡೆಸಿದರು. ಇಡೀ ರಸ್ತೆಯ ಹೊಂಡಗಳನ್ನು ಕಲ್ಲು ಹುಡಿಯಿಂದ ತುಂಬಿ ಸಂಚಾರಕ್ಕೆ ಯೋಗ್ಯ ಮಾಡುವ ಕಾರ್ಯ ನಡೆಯಿತು
ಶ್ರಮದಾನದಲ್ಲಿ ಸ್ಥಳೀಯರು ಉತ್ಸಾಹದಿಂದ ಭಾಗಿಗಳಾದರು.
