


ಬೆಳ್ತಂಗಡಿ; ನಿವೇಶನ ಮಾರಾಟದ ಬಗ್ಗೆ ಅಗ್ರಿಮೆಂಟ್ ಮಾಡಿ ರೂ 45ಲಕ್ಷ ಹಣ ಪಡೆದುಕೊಂಡು ವಂಚಿಸಿರುವ ಬಗ್ಗೆ ಬೆಳ್ತಂಗಡಿ ನಿವಾಸಿ ಪ್ರವೀಣ್ ಭಂಡಾರಿ ಅವರ ವಿರುದ್ದ ಬೆಳ್ತಂಗಡಿ ನಿವಾಸಿ ವಿಶ್ವನಾಥ ರೈ ಎಂಬವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿಶ್ವನಾಥ್ ರೈ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಅದರಲ್ಲಿ ಆರೋಪಿ ಪ್ರವೀಣ್ ಭಂಡಾರಿ ಎಂಬಾತನು ಮಹಿಳೆಯಿಬ್ಬರಿಂದ ಒಟ್ಟು 40 ಸೆನ್ಸ್ ಜಾಗವನ್ನು ಖರೀದಿ ಮಾಡಿ ಬಳಿಕ ಅದನ್ನು ವಿಶ್ವನಾಥ ರೈ ಅವರಿಗೆ ಮಾರಾಟ ಮಾಡುವುದಾಗಿ ಹೇಳಿ ರೂ 45 ಲಕ್ಷ ಹಣವನ್ನು ಪಡೆದುಕೊಂಡು ಮೂರು ತಿಂಗಳ ಒಳಗೆ ದಾಖಲೆಗಳನ್ನು ಸರಿಪಡಿಸಿ ಬರೆದು ಕೊಡುವುದಾಗಿ 9/1/24 ರಂದು ನೊಂದಾಯಿತ ಕರಾರುಪತ್ರ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಜಾಗವನ್ನು ಕ್ರಯ ಸಾಧನ ಮಾಡಿಕೊಡದೆ ಪಡೆದ ಹಣವನ್ನು ಹಿಂತಿರುಗಿಸದೆ ವಂಚಿಸಿದ್ದಾರೆ ಅಲ್ಲದೆ ಎರಡನೆ ಆಪಾದಿತರಲ್ಲಿ ಈ ಹಿಂದೆ ಮಾಡಿಕೊಂಡಿದ್ದ ಮಾರಾಟ ಕ್ರಯ ಸಾಧನವನ್ನು ರದ್ದು ಪಡಿಸಿದ್ದಾರೆ. ಈಮೂಲಕ ಪಡೆದ ಹಣವನ್ನು ಹಿಂತಿರುಗಿಸದೆ ಜಾಗವನ್ನೂ ನೀಡಿದೆ ವಂಚಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಇದೀಗ ಬೆಳ್ತಂಗಡಿ ಠಾಣೆಯಲ್ಲಿ ಸೆ. 20ರಂದು ಬಿಎನ್.ಎಸ್.u/s 316(2),318(4)ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
