


ಬೆಳ್ತಂಗಡಿ; ಅರಸಿನಮಕ್ಕಿ ಕಾಪಿನಡ್ಕ ಬಳಿ ಬೈಕ್ ಹಾಗೂ ಅಟೋ ರಿಕ್ಷಾ ನಡೆವೆ ಸಂಭವಿಸಿದ ಅಒಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸೆ21ರಂದು ಸಂಭವಿಸಿದೆ.
ಅರಸಿನಮಕ್ಕಿಯಿಂದ ಎಂಜಿರ ಕಡೆಗೆ ಬರುತ್ತಿದ್ದ ಬೈಕ್ ಅರಸಿನ ಮಕ್ಕಿ ಕಡೆಗೆ ಬರುತ್ತಿದ್ದ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ಎರಡೂ ವಾಹನಗಳು ನುಜ್ಜುಗುಜ್ಜಾಗಿದೆ. ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
