
ಬೆಳ್ತಂಗಡಿ ರೋಟರಿ ಕ್ಲಬ್ ನ ನಾಲ್ಕು ಅಂಗ ಸಂಸ್ಥೆಗಳಾದ ಆರ್.ಸಿ.ಸಿ ಮುಂಡಾಜೆ, ಆರ್.ಸಿ.ಸಿ ಕಕ್ಕಿಂಜೆ, ಆರ್.ಸಿ.ಸಿ ಕಲ್ಮಂಜ, ಆರ್.ಸಿ.ಸಿ ನೆರಿಯ ಇವುಗಳ ಪದಗ್ರಹಣ ಕಾರ್ಯಕ್ರಮವು ಮುಂಡಾಜೆಯ ಸಿ.ಎ ಬ್ಯಾಂಕ್ ನಲ್ಲಿ ನಡೆಯಿತು. ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ರೊ. ಡಾ ಜಯಕುಮಾರ್ ಶೆಟ್ಟಿ ನಾಲ್ಕೂ ಆರ್.ಸಿ.ಸಿ ಗಳ ಪದಗ್ರಹಣ ಕಾರ್ಯ ನೆರವೇರಿಸಿದರು.
ಮುಂಡಾಜೆ ಆರ್ ಸಿ ಸಿಯ ಅಧ್ಯಕ್ಷರಾಗಿ ಶ್ರೀ ಪಿ ಸಿ ಸೆಬಾಸ್ಟಿಯನ್ , ಕಾರ್ಯದರ್ಶಿಯಾಗಿ ಶ್ರೀ ರಾಕೇಶ್, ಕೋಶಾಧಿಕಾರಿಯಾಗಿ ಶ್ರೀ ರಂಗನಾಥ ಹೆಬ್ಬಾರ,
ಕಕ್ಕಿಂಜೆ ಆರ್ ಸಿ ಸಿಯ ಅಧ್ಯಕ್ಷರಾಗಿ ಶ್ರೀಮತಿ ಶಾರದ ಎ, ಕಾರ್ಯದರ್ಶಿಯಾಗಿ ಶ್ರೀ ಗೋಪಾಲಕೃಷ್ಣ ಗೌಡ, ಕೋಶಾಧಿಕಾರಿಯಾಗಿ ಶ್ರೀ ಪ್ರಾನ್ಸಿಸ್ ವಿ ಪಿ,.
ಕಲ್ಮಂಜ ಆರ್.ಸಿ.ಸಿ ಅಧ್ಯಕ್ಷರಾಗಿ ನಾಗೇಶ್ ಕಲ್ಮಂಜ, ಕಾರ್ಯದರ್ಶಿಯಾಗಿ, ದಿನೇಶ್ ಗೌಡ, ಕೋಶಾಧಿಕಾರಿಯಾಗಿ ಜಯಂತ್ ರಾವ್, ನೆರಿಯ ಆರ್ ಸಿ.ಸಿ ಸಂಸ್ಥೆಯ ಅಧ್ಯಕ್ಷ ಪಿ.ಕೆ ಬಾಲನ್, ಕಾರ್ಯದರ್ಶಿ ಬಿ.ಎಂ.ಶರೀಫ್ ಕೋಶಾಧಿಕಾರಿಯಾಗಿ ಎಂ.ಬಾಲಕೃಷ್ಣ ಗೌಡ ಅಧಿಕಾರ ಸ್ವೀಕರಿಸಿದರು.
ಪ್ರತಿಯೊಂದು ಆರ್. ಸಿ.ಸಿ ಅಧ್ಯಕ್ಷರು ತಾವು ಮುಂದೆ ಮಾಡಲಿರುವ ಸೇವಾ ಕಾರ್ಯಗಳ ವಿವರ ನೀಡಿದರು. ಅಧ್ಯಕ್ಷ ಸ್ಥಾನ ವಹಿಸಿದ ರೋಟರೀ ಕ್ಲಬ್ ಅಧ್ಯಕ್ಷರು ಪ್ರತಿ ಆರ್ ಸಿ.ಸಿ ಕ್ಲಬ್ ಗಳಿಗೆ ರೂ 20,000/- ಮ್ಯಾಚಿಂಗ್ ನೆರವು ಘೋಷಿಸಿದರು. ಹೊಸ ಸದಸ್ಯರಿಗೆ ಸರ್ಟಿಫಿಕೇಟ್ ನೀಡಲಾಯಿತು. ಆರ್ ಸಿ.ಸಿ. ಚೆಯರ್ ಮ್ಯಾನ್ ರೊ.ನಾರಾಯಣ ಭಿಡೆಯವರು ಸ್ವಾಗತ ಮಾಡಿದರು. ಕಾರ್ಯದರ್ಶಿ ರೊ. ಡಾ.ಎಂ.ಎಂ. ದಯಾಕರ್ ಶುಭ ಕೋರಿದರು. ಮುಂಡಾಜೆ ಸದಸ್ಯೆ ಅಶ್ವಿನಿ ಹೆಬ್ಬಾರ್ ಪ್ರಾರ್ಥನೆ ಮಾಡಿದರು, ಮುಂಡಾಜೆ ಆರ್ ಸಿ.ಸಿ. ಕಾರ್ಯದರ್ಶಿ ರಾಕೇಶ್ ವಂದನಾರ್ಪಣೆಗೈದರು. ರೊ. ವೆಂಕಟೇಶ್ ಭಟ್ ರವರು ಸಾರ್ಜೆಂಟ್ ಎಟ್ ಆರ್ಮ್ಸ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯರಾದ ಮೇಜರ್ ಜನೆರಲ್ ಎಂ.ವಿ.ಭಟ್, ಸಂದೇಶ್ ರಾವ್, ಶ್ರೀಧರ್ ಕೆ.ವಿ, ಪ್ರವೀಣ ಗೋರೆ, ಕಿರಣ್ ಹೆಬ್ಬಾರ್ ದಂಪತಿಗಳು ಹಾಗೂ ಆ್ಯನ್ ಗೀತಾ ಪ್ರಭು ಭಾಗವಹಿಸಿದರು.