Home ಅಪರಾಧ ಲೋಕ ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ (ಸಅ) ಅವಹೇಳನ ಪ್ಪೋಸ್ಟ್ ಪ್ರಕರಣ; ಸನಾತನಿ ಸಿಂಹ, ಚೇತನ್ ಹೊದ್ದೆಟ್ಟಿ ವಿರುದ್ಧ...

ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ (ಸಅ) ಅವಹೇಳನ ಪ್ಪೋಸ್ಟ್ ಪ್ರಕರಣ; ಸನಾತನಿ ಸಿಂಹ, ಚೇತನ್ ಹೊದ್ದೆಟ್ಟಿ ವಿರುದ್ಧ ಅಕ್ಬರ್ ಬೆಳ್ತಂಗಡಿಯಿಂದ ದೂರು ದಾಖಲು

0

ಬೆಳ್ತಂಗಡಿ: ಯುಟ್ಯೂಬ್ ಚಾನೆಲ್ ಒಂದರ ನ್ಯೂಸ್ ಲಿಂಕ್ ನಲ್ಲಿ “ಬೆಳ್ತಂಗಡಿ |ಬಂಗ್ಲೆಗುಡ್ಡ ಕಾಡಿನಲ್ಲಿ ಮುಂದುವರಿದ ಎಸ್ ಐ ಟಿ ಶೋಧ ಮತ್ತೆರಡು ತಲೆ ಬುರುಡೆ ಪತ್ತೆ” ಎಂಬ ಟೈಟಲ್ ನೊಂದಿಗೆ ಬಂದ ವರದಿಯ ಕಮೆಂಟ್ ಬಾಕ್ಸ್ ನಲ್ಲಿ “ಸನಾತನಿ ಸಿಂಹ” ಎಂಬ ಖಾತೆಯಿಂದ ‘ಒಂದು ಪೈಗಂಬರದು ಇನ್ನೊಂದು ಆಯೇಷಾ ದು’ ಎಂದು ರಿಪ್ಲಯ್ ಮಾಡಿದ್ದು ಹಾಗೂ ಅದೇ ಕಮೆಂಟ್ ಬಾಕ್ಸ್ ನಲ್ಲಿ Chetan Hoddetty ಎಂಬಾತ ‘ಒಂದು ಪೈಗಂಬರ್ ಇನ್ನೊಂದು ಆಯೇಷಾದು ಇರಬಹುದು’ ಎಂದು ಕಮೆಂಟ್ ಹಾಕಿ ಧಾರ್ಮಿಕ ನಿಂದನೆ, ಅಶಾಂತಿ ಸೃಷ್ಟಿ, ಧಾರ್ಮಿಕ ಭಾವನೆ ಕೆರಳಿಸಿ ಕೋಮು ಗಲಭೆ ಮಾಡುವ ಷಡ್ಯಂತ್ರ ಮತ್ತು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೃತ್ಯವನ್ನು ನಡೆಸಿದ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದವರನ್ನು ಈ ಕೂಡಲೇ ಬಂಧಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ದೂರು ನೀಡುವ ಸಂದರ್ಭದಲ್ಲಿ ಬೆಳ್ತಂಗಡಿ ವಿಧಾನಸಭಾ ಸಮಿತಿ ಸದಸ್ಯ ಅಶ್ರಫ್ ಕಟ್ಟೆ, ಸಲೀಂ ಸುನ್ನತ್ ಕೆರೆ, ಇಮ್ತಿಯಾಝ್ ಜಿ.ಕೆ, ಆರಿಫ್ ಕುಂಟಿನಿ ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version