


ಬೆಳ್ತಂಗಡಿ : ಎಸ್.ಐ.ಟಿ ಕಾರ್ಯಾಚರಣೆಯಲ್ಲಿ ಬುಧವಾರ ಪತ್ತೆಯಾದ ಐದು ಮಾನವನ ಅಸ್ಥಿಪಂಜರಗಳಿಗೆ ಸಂಬಂಧಿಸಿದಂತೆ ಕೆಲವೊಂದು ಪ್ರಾಥಮಿಕ ಮಾಹಿತಿಗಳು ಹೊರಬಂದಿದ್ದು ಮಹಜರು ಮಾಡಲಾಗಿರುವ ಐದು ಅವಶೇಷಗಳು ಪುರುಷರದ್ದಾಗಿದೆ ಎಂದು ಎಸ್.ಐ.ಟಿ ಮೂಲಗಳಿಂದ ಮಾಹಿತಿ ಲಭ್ಯವಾಗುತ್ತಿದೆ.
ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸೆ.17 ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಐದು ಮಾನವನ ತಲೆಬುರುಡೆ ಸಮೇತ ಅವಶೇಷಗಳು ಪತ್ತೆಯಾಗಿದೆ.
ತಲೆಬುರುಡೆ ಮತ್ತು ಅವಶೇಷಗಳನ್ನು ತಜ್ಞ ವೈದ್ಯರ ತಂಡ ಮಹಜರು ವೇಳೆ ಮೇಲ್ನೋಟಕ್ಕೆ ಐದು ಕೂಡ ಪುರುಷನ ತಲೆಬರುಡೆ ಮತ್ತು ಅವಶೇಷಗಳು ಎಂದು ವೈದ್ಯರು ಅಭಿಪ್ರಾಯ ಪಟ್ಟಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗಳು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಿಂದಲೇ ಸ ಸ್ಪಷ್ಟವಾಗಬೇಕಾಗಿದೆ.
