Home ಸ್ಥಳೀಯ ಸಮಾಚಾರ ಫೋಟೋಗ್ರಫಿಯಲ್ಲಿ ಅಪಾರ ಅವಕಾಶಗಳಿವೆ. ರುಡ್‌ಸೆಟ್ ಸಂಸ್ಥೆಯಲ್ಲಿ  ಫೋಟೊಗ್ರಫಿ ತರ ಬೇತಿಯ ಸಮಾರೋಪ

ಫೋಟೋಗ್ರಫಿಯಲ್ಲಿ ಅಪಾರ ಅವಕಾಶಗಳಿವೆ. ರುಡ್‌ಸೆಟ್ ಸಂಸ್ಥೆಯಲ್ಲಿ  ಫೋಟೊಗ್ರಫಿ ತರ ಬೇತಿಯ ಸಮಾರೋಪ

41
0

ಉಜಿರೆ: ಫೋಟೋಗ್ರಫಿಯಲ್ಲಿ ಇಂದು ಅಪಾರ ಅವಕಾಶಗಳ:ಇದ್ದು, ಭಾವನೆಗಳನ್ನು ಅರ್ಥಮಾಡಿಕೊಂಡು ಸಂದರ್ಭೋಚಿತವಾಗಿ ತಾಳ್ಮೆಯಿಂದ ಫೋಟೊ ತೆಗೆಯಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದರು.
ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಫೋಟೊಗ್ರಫಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು.
ಹಾಸನದ ಮಂಗಳಾ, ರೂಪಾ, ಮಂಡ್ಯದ ಮಧುಕರ್ ತರಬೇತಿ ಬಗ್ಯೆ ಅನುಭವ, ಅನಿಸಿಕೆ ವ್ಯಕ್ತಪಡಿಸಿದರು.
ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಉಪನ್ಯಾಸಕ ಕರುಣಾಕರ ಜೈನ್ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರ್ವಹಿಸಿದರು.

ಧರ್ಮಸ್ಥಳದಲ್ಲಿ ಪುರಾಣ ವಾಚನ-ಪ್ರವಚನ ಸಮಾರೋಪ ಸಮಾರಂಭ:
ಚಿತ್ರ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪುರಾಣ ವಾಚನ-ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ವಾಂಸರನ್ನು ಗೌರವಿಸಿದರು.
ಉಜಿರೆ: ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಜುಲೈ ೧೬ ರಿಂದ ಸೆ. ೧೬ರ ವರೆಗೆ ಎರಡು ತಿಂಗಳ ಕಾಲ ಪ್ರತಿದಿನ ಸಂಜೆ ಗಂಟೆ ೬.೩೦ ರಿಂದ ೮ರ ವರೆಗೆ ನಡೆದ ೫೪ ನೇ ವರ್ಷದ ಪುರಾಣ ವಾಚನ-ಪ್ರವಚನದಲ್ಲಿ ಭಾಗವಹಿಸಿದ ವಿದ್ವಾಂಸರು ಹಾಗೂ ಕಲಾವಿದರನ್ನು ಸೆ. ೧೬ ರಂದು ಮಂಗಳವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗೌರವಿಸಿ, ಅಭಿನಂದಿಸಿದರು

LEAVE A REPLY

Please enter your comment!
Please enter your name here