
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರು ದಾರನಾಗಿ ಬಂದು ಇದೀಗ ಶಿವಮೊಗ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸಾಕ್ಷಿ ದೂರುದಾರ ಚಿನ್ನಯ್ಯನ ಜಾಮೀನು ಅರ್ಜಿಯಲ್ಲಿ ಸೆ 16 ರಂದು ಬೆಳ್ತಂಗಡಿ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.
ಸೆ.12 ರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆ
ನಡೆಸಿದ ನ್ಯಾಯಾಲುವು ತೀರ್ಪನ್ನು ಸೆ 16 ಕ್ಕೆ ಕಾಯ್ದಿರಿಸಿತ್ತು.
ಪ್ರಕರಣದ ವಿಚಾರಣೆ ವೇಳೆ ಎಸ್.ಐ.ಟಿ ಯಿಂದ ಜಾಮೀನು ನೀಡದಂತೆ ಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸಿದ್ದರು. ಚಿನ್ನಯ್ಯ ಪರ ಉಚಿತ ಕಾನೂನು ಸೇವಗಳ ಪ್ರಾಧಿಕಾರದ ವಕೀಲರು ವಾದ ಮಂಡಿಸಿದ್ದರು.
ಪ್ರಕರಣದ ವಿಚಾರಣೆ ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿ ಬಗ್ಗೆ ತೀರ್ಪನ್ನು ಸೆ.16 ಕ್ಕೆ ಕಾಯ್ದಿರಿಸಿದ್ದರು.