Home ರಾಜಕೀಯ ಸಮಾಚಾರ ಉಜಿರೆ ರಬ್ಬರ್ ಸೊಸೈಟಿಆಡಳಿತ ಮಂಡಳಿಯ 15 ನಿರ್ದೇಶಕರುಗಳ ಸ್ಥಾನಕ್ಕೆ ಆವಿರೋಧ ಆಯ್ಕೆ

ಉಜಿರೆ ರಬ್ಬರ್ ಸೊಸೈಟಿಆಡಳಿತ ಮಂಡಳಿಯ 15 ನಿರ್ದೇಶಕರುಗಳ ಸ್ಥಾನಕ್ಕೆ ಆವಿರೋಧ ಆಯ್ಕೆ

0


ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘುಳ ಉಜಿರೆ ಇದರ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 15 ನಿರ್ದೇಶಕರುಗಳ ಸ್ಥಾನಕ್ಕೆ ಸೆ.21ರಂದು ನಿಗದಿಯಾಗಿದ್ದ ಚುನಾವಣೆಗೆ ಎಲ್ಲಾ ಸ್ಥಾನಗಳಿಗೆ ನಿರ್ದೇಶಕರುಗಳು ಆವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಕಾರಿ ಸಂಘ- ಸಂಸ್ಥೆಗಳು ಸ್ಥಾನದಿಂದ ಹಾಲಿ ಅಧ್ಯಕ್ಷ ಶ್ರೀಧರ ಜಿ. ಭಿಡೆ, ಸಾಮಾನ್ಯ ಸ್ಥಾನ ಬೆಳ್ತಂಗಡಿ ಫಿರ್ಕಾದಿಂದ ಹಾಲಿ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಹಿಂದುಳಿದ ವರ್ಗ ಎ ಮೀಸಲು ಸ್ಥಾನ ಬೆಳ್ತಂಗಡಿ ಫಿರ್ಕಾದಿಂದ ಸೋಮನಾಥ ಬಂಗೇರ ವರ್ಪಾಳೆ, ಹಿಂದುಳಿದ ವರ್ಗ ಬಿ.ಮೀಸಲು ಸ್ಥಾನ ಕೊಕ್ಕಡ ಫಿರ್ಕಾದಿಂದ ಎಚ್. ಪದ್ಮಗೌಡ ಬೆಳಾಲು, ಗ್ರೇಸಿಯನ್ ವೇಗಸ್ ಕನ್ಯಾಡಿ ಮತ್ತು ಬಾಲಕೃಷ್ಣ ಗೌಡ ಕೇರಿಮಾರ್,
ಸಾಮಾನ್ಯ ಸ್ಥಾನ ವೇಣೂರು ಫಿರ್ಕಾದಿಂದ ಡಾ. ಶಶಿಧರ ಡೋಂಗ್ರೆ ಶೇಣೆರೆಬೈಲ್, ಕೊಕ್ಕಡ ಫಿರ್ಕಾದಿಂದ ಶಾಜಿ ಪಿ.ಎ. ಶಿಬಾಜೆ, ಕೆ.ಜೆ ಆಗಸ್ಟೀನ್ ಪೆರ್ಮಾಣು, ಭರತ್ ಕುಮಾರ್ ಎಚ್. ಇಂದಬೆಟ್ಟು, ತಿಮ್ಮಪ್ಪ ಗೌಡ ಪಿ. ಬೆಳಾಲು, ಮಹಿಳಾ ಮೀಸಲು ಸ್ಥಾನದಿಂದ ಸುಭಾಷಿಣಿ ಆರ್. ಮಠದಬೈಲು, ಜಯಶ್ರೀ ಡಿ.ಎಂ. ಉಜಿರೆ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಬೈರಪ್ಪ ಕಲ್ಲಗುಡ್ಡೆ , ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಕೆ. ರಾಮನಾಯ್ಕ ಕಾಯರ್ತಡ್ಕ ಅವಿರೋಧವಾಗಿ ಆಯ್ಕೆಯಾದವರು.
ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಪುತ್ತೂರು ಉಪ ಸಹಾಯಕ ನಿಬಂಧಕರಾದ ಎಂ. ರಘು ಕಾರ್ಯನಿರ್ವಹಿಸಿದ್ದರು. ಸಂಘದ ಸಿಇಒ ರಾಜು ಶೆಟ್ಟಿ ಸಹಕರಿಸಿದರು

NO COMMENTS

LEAVE A REPLY

Please enter your comment!
Please enter your name here

Exit mobile version